ಸಿದ್ದಣ್ಣ ಸಿಎಂ ಆಗ್ಲಿ ಅಂದ್ರೆ ನಾಳೆನೇ ಆಗ್ಲೀ ಅಂಥ ಅರ್ಥವಲ್ಲ, ಕುಮಾರಸ್ವಾಮಿಗೆ ಈ ಬಗ್ಗೆ ಆತಂಕ ಬೇಡ : ಚೆಲುವರಾಯ ಸ್ವಾಮಿ

 

ಮಂಡ್ಯ ಮೇ 09, 2019 : (www.justkannada.in news ) ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹಲವು ಶಾಸಕರು,ಮುಖಂಡರು ಬಯಸಿದ್ದಾರೆ. ನಾಳೆ ಬೆಳಿಗ್ಗೆಯೇ ಕುಮಾರಸ್ವಾಮಿ ಅವ್ರನ್ನ ಬದಲಾಯಿಸಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅವರ್ಯಾರು ಹೇಳಿಲ್ಲ. ಆದ್ದರಿಂದ ಕುಮಾರಸ್ವಾಮಿಗೆ ಈ ಬಗ್ಗೆ ಆತಂಕ ಬೇಡ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಅವರು ಹೇಳಿದಿಷ್ಟು……..
ನಮಗೆ ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆ ನಾಯಕ ಸಿಎಂ ಆಗಬೇಕು, ಎಲ್ಲಾ ವರ್ಗರದವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಬೇಕು ಅಂತ ಹೇಳಿದ್ದಾರೆ. ಇದರ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲರೂ ಮಾತನಾಡಿದ್ದಾರೆ.
ಸಿಎಂ ಒಂದು ರಾಷ್ಟ್ರೀಯ ಪಕ್ಕಕ್ಕೆ ಸೂಚನೆ ನೀಡಿದ್ದಾರೆ. 37 ಸ್ಥಾನ ಗೆದ್ದು ಸಿಎಂ ಆಗಿ 80ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ. ನೀವು ಹೀಗೆ ನಡೆದುಕೊಳ್ಳಬೇಕು ಹಾಗೇ ನಡೆದುಕೊಳ್ಳಬೇಕು ಅಂತ. ಆದ್ರೆ ಅವರ ನಡವಳಿಕೆ ಮಾತ್ರ ಬದಲಾವಣೆ ಮಾಡಿಕೊಳ್ಳಲ್ಲ. ಯಾವುದೇ ಮೈತ್ರಿ ಸರ್ಕಾರದಲ್ಲಿ ಈ ರೀತಿಯ ನಡವಳಿಕೆ ನಾವು ನೋಡಿಲ್ಲ. ಮೈತ್ರಿ ಸರ್ಕಾರದ ವಿರುದ್ಧ ಚಲುವರಾಯಸ್ವಾಮಿ ಅಸಮಾಧಾನ.

ಮಂಡ್ಯದಲ್ಲಿ ಮನಮುಲ್ ಚುನಾವಣೆ ನಡಿಬೇಕಿತ್ತು. ರಾಜ್ಯದ ಎಲ್ಲಾ ಕಡೆ ಮನ್‌ಮುಲ್ ಚುನಾವಣೆ ನಡೀತಿದೆ. ಸರ್ಕಾರ ಚುನಾವಣೆ ಚುನಾವಣೆ ನಡೀಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಗೆ ಕೆಲಸ ಮಾಡಬೇಕು. ನಾಚಿಕೆ ಆಗಬೇಕು ಕೋಆಪರೇಟ್ ಅಧಿಕಾರಿಗಳಿಗೆ. ಮಾನಮರ್ಯಾದೆ ಇದ್ರೆ ಮಂಡ್ಯ ಮನ್‌ಮುಲ್‌ ಚುನಾವಣೆ ನಡೆಸಲಿ. ಈ ಚುನಾವಣೆ ನಿಲ್ಸಿದ್ರೆ, ಅಡ್ಮಿನಿಸ್ಟ್ರೇಶನ್ ಹಾಕಿದ್ರೆ ಜಿಲ್ಲೆ ಜನ ಉಪವಾಸ ಇರಲ್ಲ. ಮಂಡ್ಯ ಮನ್‌ಮುಲ್ ಬೇರೆ ಕಡೆಗಿಂತ ಉತ್ತಮವಾಗಿದೆ. ಮಂಡ್ಯ ಮನ್‌ಮುಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಿರ್ದೇಶಕರಿದ್ದಾರೆ ಅಂತ ಈ ರೀತಿ ಮಾಡಿದ್ದರೆ. ದ್ವೇಷದ ರಾಜಕಾರಣವನ್ನ ಸಿಎಂ‌ ಮಾಡ್ತಿದ್ದಾರೆ.

cheluvarayaswamy-mandya-congress