ಸಚಿವ ಸಿ.ಟಿ ರವಿಗೆ ಟಾಂಗ್: ರಾಜ್ಯಪಾಲರ ಭಾಷಣಕ್ಕೆ ಅನಗತ್ಯವಾಗಿ ವಿರೋಧ ಮಾಡಲ್ಲ ಎಂದ್ರು ಮಾಜಿ ಸಿಎಂ ಸಿದ್ಧರಾಮಯ್ಯ…

ಚಿಕ್ಕಮಗಳೂರು,ಜ,31,2020(www.justkannada.in): ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಅನಗತ್ಯವಾಗಿ ವಿರೋಧ ಮಾಡಲ್ಲ. ರಾಜ್ಯಕ್ಕೆ ವಿರೋಧ ಇರುವಂತಹ ವಿಚಾರ ಇದ್ರೆ ವಿರೋಧ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾಗಿ ವಿಧಾನ ಸಭೆಗೆ ಬರೋದು.  ಜನರ ಪ್ರತಿನಿಧಿಗಳಾಗಿ, ಜನರ ದ್ವನಿಯಾಗಿ ಕೆಲಸ ಮಾಡಬೇಕು. ರಾಜ್ಯಪಾಲರ ಭಾಷಣ ಅನಗತ್ಯವಾಗಿ ವಿರೋಧ ಮಾಡಲ್ಲ ರಾಜ್ಯಕ್ಕೆ ವಿರೋಧ ಇರುವಂತಹ ವಿಚಾರ ಇದ್ರೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಇನ್ನು ತಮ್ಮನ್ನ ಚರ್ಚೆಗೆ ಕರೆದಿದ್ದ  ಸಚಿವ ಸಿ.ಟಿ ರವಿಗೆ ಟಾಂಗ್ ನೀಡಿದ ಸಿದ್ಧರಾಮಯ್ಯ, ಸಿ.ಟಿ ರವಿ ಯಾವತ್ತು ಸತ್ಯ ಹೇಳಿ ಗೊತ್ತಿಲ್ಲ.ಸುಳ್ಳನ್ನೇ ಮೈಗೂಡಿಸಿಕೊಂಡಿದ್ದಾರೆ. ಹಳ್ಳಿಗಳಿಗೆ ಹೋಗಿ ಜನರನ್ನ ಕೇಳೋಣ ಜನರ ಏನೂ ಹೇಳ್ತಾರೆ ನೋಡೋಣ. ಜನರು ಅವರ ಅಭಿವೃದ್ಧಿ ಯಾಗಿದೆ ಜನರ ಅಭಿವೃದ್ಧಿ ಯಾಗಿಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು.

ನಾಳೆ ಕೇಂದ್ರ ಬಜೆಟ್ ಇದ್ದು, ಕಳೆದ ಬಾರಿ ಬಜೆಟ್ 27 ಲಕ್ಷ ಕೋಟಿ ಖರ್ಚು ಮಾಡುತ್ತೇನೆ ಎಂದಿದ್ರು ನಾಳೆ ಗೊತ್ತಾಗುತ್ತದೆ. ಸ್ವರ್ಗ ಸೃಷ್ಠಿ ಮಾಡ್ತೇನೆ ಅಂದಿದ್ರು ಅದ್ರೆ ಈಗ ನರಕವಾಗಿದೆ. ಜಿಡಿಪಿ ಅವರ ಪ್ರಕಾರ 4.5 % ನನ್ನ ಪ್ರಕಾರ 2.5%.10 ಕೋಟಿ ಉದ್ಯೋಗ ಸೃಷ್ಠಿ ಮಾಡ್ತೇವೆ ಅಂದಿದ್ರು. ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ಮುಚ್ಚಿ ಹಾಕಲು ಸಿಎಎ, ಎನ್ ಅರ್ ಸಿ ಮೂಲಕ ಬೇರೆ ಕಡೆ ಸೆಳೆಯಲು ನಾಟಕವಾಡುತ್ತಿದ್ದಾರೆ. ಮಹಾತ್ಮ ಗಾಂಧಿಯನ್ನ ಕೊಂದಿದ್ದು ಅರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾದವರು ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ದೆಹಲಿಯಲ್ಲಿ ನಿನ್ನೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಚೋದನೆಯಿಂದಲೇ ನಿನ್ನೆ ಗುಂಡು ಹಾರಿಸಿರೋದು ಎಂದರು.

Key words: chikkamagalore-Former CM -Siddaramaiah – not unnecessarily -opposed – governor’s- speech.