ಆಕ್ಸಿಜನ್ ಸೌಲಭ್ಯವಿಲ್ಲದೆ  ಸರ್ಕಾರಿ ಆ್ಯಂಬುಲೆನ್ಸ್ ನಲ್ಲಿ ಮಗು ಸಾವು

ಮೈಸೂರು,ಮಾರ್ಚ್,20,2025 (www.justkannada.in):  ಆಕ್ಸಿಜನ್ ಸೌಲಭ್ಯ ಇಲ್ಲದ ಕಾರಣ ಸರ್ಕಾರಿ ಆಂಬುಲೆನ್ಸ್ ನಲ್ಲಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ನಂಜನಗೂಡು ನಗರದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಮತ್ತು ಕುಮಾರ್ ಎಂಬ ದಂಪತಿಗಳ ಮಗು ಮೃತಪಟ್ಟಿದೆ.

ಮಾರ್ಚ್ 17ನೇಯ ತಾರೀಖಿನಂದು ಹೆರಿಗೆಗೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರತ್ನಮ್ಮ ದಾಖಲಾಗಿದ್ದರು. ರತ್ನಮಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಗು ಆರೋಗ್ಯಕರವಾಗಿದ್ದು ಕ್ಷಣಾರ್ಧದಲ್ಲಿಯೇ ನೀಲಿ ಬಣ್ಣಕ್ಕೆ ತಿರುಗಿದೆ. ಹುಟ್ಟಿದ ಮಗು ನೀಲಿ ಬಣ್ಣಕ್ಕೆ ತಿರುಗಿದ ಪರಿಣಾಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ದಾದಿಯರು ಗಾಬರಿಯಾಗಿದ್ದಾರೆ. ನಂತರ ಮಗು ಸ್ಥಿತಿ ನೋಡಿ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ದರು. ಮಗುವಿನ ಸ್ಥಿತಿಗತಿ ನೋಡಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆಯ ಸಿಬ್ಬಂದಿಗಳು ಮುಂದಾಗಿದ್ದಾರೆ

ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ದೊಡ್ಡಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಮಗುವನ್ನ ರವಾನಿಸಲು ಮುಂದಾಗಿದ್ದಾರೆ.  ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ತಿಳಿದಿದ್ದರೂ ಮಗುವನ್ನು ಮೈಸೂರಿಗೆ ರವಾನಿಸಿದ್ದು, ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಮಗು ಸಾವನ್ನಪ್ಪಿದೆ.

ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನ ಮಗುವಿನ ಸಾವಿಗೆ ಕಾರಣ ಎಂದು ಪೋಷಕರ ಆರೋಪ ಮಾಡಿದ್ದಾರೆ.  ಮಗು ಕಳೆದುಕೊಂಡ ತಾಯಿ ರತ್ನಮ್ಮ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಷಕರ ಜೊತೆಗೂಡಿ ರೋದನೆ ಪಟ್ಟರು.

Key words: Child, dies, government ambulance, oxygen, facility