ಮೈಸೂರು,ಆಗಸ್ಟ್,19,2021(www.justkannada.in): ತನಗೆ ಬಾಲ್ಯ ವಿವಾಹ ಮಾಡಲು ಮನೆಯವರು ಮುಂದಾದ ಹಿನ್ನೆಲೆ ಇದಕ್ಕೆ ವಿರೋಧಿ ವ್ಯಕ್ತಪಡಿಸಿದ ಬಾಲಕಿಯೊಬ್ಬಳು ಅಧಿಕಾರಿಗಳಿಗೆ ಪತ್ರ ಬರೆದು ಬಾಲ್ಯ ವಿವಾಹ ತಪ್ಪಿಸಿ ತನಗೆ ಶಿಕ್ಷಣ ಕೊಡಿಸಿ ಎಂದು ಮನವಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹಾಸನ ಮೂಲದ ಬಾಲಕಿ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿಗೆ ಪತ್ರ ಬರೆದಿದ್ದಾಳೆ. ತನಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲಿ ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಸ್ಎಸ್ಎಲ್ಸಿ ಉತ್ತೀರ್ಣಳಾಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಬಾಲಕಿ ಮನವಿ ಮಾಡಿದ್ದಾಳೆ.
ಮನೆ ಬಿಟ್ಟು ಬಂದಿರುವ ಬಾಲಕಿ ಸದ್ಯ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದಳು. ನಂತರ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಧಿಕಾರಿ ಸಂಪರ್ಕಿಸಿ ಬಾಲಕಿ ಪತ್ರ ನೀಡಿದ್ದಾಳೆ. ಇದೀಗ ಬಾಲಕಿಗೆ ಬಾಲಮಂದಿರಲ್ಲಿ ಆಶ್ರಯ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ENGLISH SUMMARY….
Child marriage: Minor girl writes letter to officials to rescue and provide education to her
Mysuru, August 19, 2021 (www.justkannada.in): Opposing the decision of child marriage by family members a minor girl has pleaded with the officials concerned to protect her and help her to get education.
The girl hailing from Hassan has pleaded with the Child Development Program Officer in Periyapatna, by writing a letter. In the letter, she has mentioned that she is an orphan and her caretakers had decided to marry her off. “I have passed in SSLC exams and I like to study further. Hence, I request you to protect me and help me to get further education,” her letter read.
The girl who has escaped from the house was staying at one of her friend’s house in Periyapatna in Mysuru District. She wrote a letter to the Child Development Program Officer in Periyapatna. The officials have sent her to the Bala Mandira, as of now.
Keywords: Minor/ Hassan District/ Periyapatna/ child marriage/ plead/ letter
Key words: child marriage-: Education-girl – letter – officer-mysore