ಮೈಸೂರು,ಅಕ್ಟೋಬರ್, 17,2024 (www.justkannada.in): ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಅಕ್ಟೋಬರ್ 19ರ ಶನಿವಾರ ಸಂಜೆ 6.30 ಕ್ಕೆ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಪ್ರಸನ್ನ ಅವರು ನಿರ್ದೇಶಿಸಿದ ಮಕ್ಕಳ ನಾಟಕ ‘ ಪಿಪ್ಪಿ ಗೊಂದು ಪಪ್ಪಿ ‘ ಪ್ರದರ್ಶನವಾಗಲಿದೆ.
ಈ ನಾಟಕವೂ ದೊಡ್ಡವರು ಮಕ್ಕಳಿಗಾಗಿ ಅಭಿನಯಿಸಿರುವ ನಾಟಕವಾಗಿದ್ದು, ಸುಪ್ರೀತ್ ಭಾರದ್ವಾಜ್, ಭ್ರಮರ ಹಾಗೂ ರಾಜೇಶ್ ಮಾಧವನ್ ಅಭಿನಯಿಸಿದ್ದಾರೆ. ಸಂಗೀತದಲ್ಲಿ ಆದಿತ್ಯ ಅವರು ಜೊತೆಯಾಗಲಿದ್ದಾರೆ. ಹತ್ತು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.
ನಾಟಕದ ಕುರಿತು:
ಆಸ್ಟ್ರಿಡ್ ಲಿಂಡ್ಗ್ರೆನ್ ಅವರಿಂದ ಪ್ರೇರಿತರಾಗಿ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಪಿಪ್ಪಿಗೊಂದು ಪಪ್ಪಿ ನಾಟಕ ಸಾಹಸಮಯ ಬದುಕನ್ನು ಬದುಕುವ ಒಬ್ಬ ಅನಾಥ ಹುಡುಗಿಯದು. ಇವಳು ಪಿಪ್ಪಿ, ಅನಾಥೆಯಾಗಿದ್ದರೂ ಧೈರ್ಯಸ್ಥೆ, ನಗುಮುಖದವಳು ಮತ್ತು ಸಂತೋಷವಾಗಿ ಬದುಕನ್ನು ಸಂಭ್ರಮಿಸಬಲ್ಲವಳು. ಪುಸ್ತಕದ ಭಾರ ಹೊತ್ತು ಮಧ್ಯಮವರ್ಗದ ನೂರಾರು ಕಟ್ಟಲೆಗಳಿಂದ ಸುಸ್ತಾದ ಮಂಜು ಮತ್ತು ಹಂಸವೇನಿಯೊಂದಿಗೆ ಸ್ನೆಹಸಾಧಿಸುವ ಪಿಪ್ಪಿ ಒಂದು ಆನೆ ಒಂದು ಕೋತಿ, ಇಲಿಗಳ ಜೊತೆಗೆ ಇವರನ್ನೂ ಸೇರಿಸಿಕೊಂಡು ಅಡ್ವೆಂಚರ್ ನ ನಡೆಸುತ್ತಾಳೆ. ಈ ಪಿಪ್ಪಿಯ ಪಯಣ ಮಕ್ಕಳಿಗೆ ಆಟ ದೊಡ್ಡವರಿಗೆ ಪಾಠ.
Key words: Children, drama show, Pippi gondu Puppy, mysore