ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ.

ಮೈಸೂರು,ಜುಲೈ,29,2021(www.justkannada.in): ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಒಂದು ಮಗು ಮಾರಾಟದ ಕೇಸ್ ಬೆನ್ನತ್ತಿದ ಪೊಲೀಸರಿಗೆ ಇದೀಗ ಹಲವು ಮಕ್ಕಳ ಮಾರಾಟದ ಸುಳಿವು ಸಿಕ್ಕಿದೆ.

ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಇತ್ತೀಚೆಗೆ ಮಗುವೊಂದು ಮಾರಾಟವಾಗಿತ್ತು. ಗಂಡ ಸತ್ತ ಬಡ ಮಹಿಳೆಯೊಬ್ಬಳು ತಮ್ಮ ಮೂರು ತಿಂಗಳ ಮಗುವನ್ನು ಬೇರೊಬ್ಬಳಿಗೆ ನೀಡಿದ್ದಳು. ಈ ಪ್ರಕರಣದ ಬೆನ್ನಲ್ಲೇ ನಂಜುಂಡನ ಊರಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ.

ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದ್ದು,  ಶ್ರೀಮತಿ ಎಂಬಾಕೆಯೇ ಈ ಜಾಲದ ಕಿಂಗ್​ಪಿನ್​ ಆಗಿದ್ದು, ಭಿಕ್ಷುಕರು, ನಿರ್ಗತಿಕರು, ವಿಧವೆಯರು, ಬೀದಿಬದಿಯ ನಿವಾಸಿಗಳೇ ಈಕೆಯ ಟಾರ್ಗೆಟ್ ಆಗಿದೆ. ನಾನು ಅನಾಥಾಶ್ರಮ ನಡೆಸುತ್ತಿದ್ದೇನೆ, ನಿಮ್ಮ ಮಗುವನ್ನು ಚೆನ್ನಾಗಿ ಸಾಕುತ್ತೇನೆ ಅಂತೆಲ್ಲ ನಂಬಿಸಿ ಮಗುವನ್ನು ಪಡೆದುಕೊಳ್ತಾಳೆ.  ಹೀಗೆ ಪಡೆದ ನವಜಾತ ಶಿಶುವನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡ್ತಾಳೆ.

ಜ್ಯೋತಿ ಎಂಬ ಮಹಿಳೆ ಇತ್ತೀಚೆಗೆ ಮೂರು ತಿಂಗಳ ಮಗುವನ್ನು ಶ್ರೀಮತಿಗೆ ನೀಡಿದ್ದಳು. ಆರಂಭದಲ್ಲಿ ಈ ಪ್ರಕರಣದಲ್ಲಿ ಆರ್ಥಿಕ ವಹಿವಾಟು ನಡೆದಿಲ್ಲ ಎನ್ನಲಾಗಿತ್ತು. ಆದ್ರೆ ತನಿಖೆ ತೀವ್ರಗೊಳಿಸಿದಾಗ, ದಲ್ಲಾಳಿ ಶ್ರೀಮತಿ ಮಗು ಮಾರಾಟ ಮಾಡಿ 3 ಲಕ್ಷ ರೂ.ವರೆಗೂ ಹಣ ಪಡೆದುಕೊಂಡಿದ್ದಾಳೆ ಎಂಬುದು ಬಯಲಿಗೆ ಬಂದಿದೆ. ಈಕೆಯ ಮೂಲಕವೇ ಮತ್ತಷ್ಟು ಮಕ್ಕಳ ಮಾರಾಟವಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ ಮಕ್ಕಳ ಮಾರಾಟ ಜಾಲ ಭೇದಿಸಲು ತೀವ್ರವಾದ ತನಿಖೆ ನಡೆಸಲಾಗುತ್ತಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ENGLISH SUMMARY….

Child trafficking network found in Mysuru
Mysuru, July 29, 2021 (www.justkannada.in): A child trafficking gang has been discovered in Mysuru. The Mysuru police who were investigating the trafficking case have found traces of several children being trafficked.
A case of child trafficking was reported recently in Nanjangud, in Mysuru District. A poor woman who had lost her husband recently had given her three-month-old child to some other woman. Following this, a child trafficking gang has been unearthed in Najangud.
Mysuru District Superintendent of Police R. Chetan who provided the information also mentioned that a woman by name Srimati, is the kingpin of this racket. Beggars, destitute, widows, people residing on the roadside were her target. She used to say that she is running an orphanage and would look after their children nicely and somehow convince them and take their children. She used to sell the children in turn for lakhs of rupees.
Recently a woman called Jyothi had given her three-month-old infant to Srimati. In the beginning, no traces of financial transaction was found in this case. But deeper interrogation exposed that the broker Srimati had sold the infant for Rs. 3 lakh. Police have suspected more number of children trafficked by her and are further interrogating to discover a probable network, according to SP R. Chetan.
Keywords: Mysuru/ Nanjangud/ Child trafficking/ gang/ network/ SP R. Chetan/ Police

Key words: Children’s -sales network-i- Mysore district-SP-R.chethan- Information