ವಾಷಿಂಗ್ಟನ್, ಏಪ್ರಿಲ್ 28, 2020 (www.justkannada.in): ಕೊರೊನಾ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ.
ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ 140 ಶತಕೋಟಿ ಡಾಲರ್ ಪರಿಹಾರವನ್ನು ಜರ್ಮನಿ ಕೇಳಿದರೆ, ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರವನ್ನು ಅಮೆರಿಕಾ ಕೇಳಿದೆ.
ಜಗತ್ತಿನಲ್ಲಿ ಇಂದು ನೋಡಿದರೆ ಇಡೀ ವಿಶ್ವಕ್ಕೆ ಇಂದು ನಷ್ಟವಾಗಿದೆ. ನಮ್ಮ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ಆಗಿದೆ. ಕೊರೋನಾ ವೈರಸ್ ಹಬ್ಬಲು ಚೀನಾ ದೇಶವೇ ಕಾರಣ. ಈ ಬಗ್ಗೆ ನಾವು ಗಂಭೀರವಾಗಿ ತನಿಖೆ ಕೈಗೊಳ್ಳುತ್ತೇವೆ. ಚೀನಾ ಮೇಲೆ ನಮಗೆ ಸಿಟ್ಟು, ಆಕ್ರೋಶವಿದೆ ಎಂದು ಅಮೆರಿಕಾ ಹೇಳಿದೆ.