ಮೈಸೂರು, ಮಾ.23, 2020 : (www.justkannada.in news ) : ಕರೋನಾ ವೈರಸ್ ನ ಭೀಕರತೆ ಬಗ್ಗೆ 2007 ರಲ್ಲೇ ಚೀನಿಯರಿಗೆ ಎಚ್ಚರಿಸಲಾಗಿತ್ತು. ಆದರೆ ಅವರು ಈ ಎಚ್ಚರಿಕೆ ಕಡೆಗಣಿಸಿದ ಪರಿಣಾಮ ಇಂದು ವಿಶ್ವವೇ ಸಾವಿನ ಮನೆಯಂತಾಗಿ ನರಳುತ್ತಿದೆ.
ಕರೋನಾ ವೈರಸ್ ಬಗ್ಗೆ 2003 ರಲ್ಲೇ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಬಳಿಕ 2007 ರಲ್ಲಿ ವೈರಸ್ ನ ಬಗೆಗೆ ಸಂಪೂರ್ಣ ಸಂಶೋಧನೆ ನಡೆಸಲಾಯಿತು. ಹಾಂಗ್ ಕಾಂಗ್ ನ ‘ ದ ಯೂನಿವರ್ಸಿಟಿ ಆಫ್ ಹಾಂಗ್ ಕಾಂಗ್ ‘ ಮೈಕ್ರೋಬಯಾಲಜಿ ವಿಭಾಗದ ‘ ಕ್ಲಿನಿಕಲ್ ಮೈಕ್ರೋಬಯಾಲಜಿ ರಿವಿವ್ 2007 ‘ ರ ಸಂಶೋಧನ ಪ್ರಬಂಧದದಲ್ಲಿ ಅಪಾಯಕಾರಿ ಕರೋನಾ ವೈರಸ್ ಗೆ ಸಂಬಂಧಿಸಿದ ಮಾಹಿತಿ ಪ್ರಕಟವಾಗಿದೆ.
ಕರೋನಾ ವೈರಸ್ ಬಾವಲಿಗಳಲ್ಲಿ ಹೆಚ್ಚಾಗಿ ಕಂಡು ಬಂದಿರುವುದು ಸಂಶೋಧನೆಯಲ್ಲಿ ಪತ್ತೆಯಾಯಿತು. ಈ ಕಾರಣಕ್ಕೆ ಚೀನಿಯರ ಆಹಾರ ಪದ್ಧತಿ ಬಗೆಗೂ ಆಕ್ಷೇಪಿಸಿ, ಬಾವಲಿ ತಿನ್ನುವುದನ್ನು ತ್ಯಜಿಸುವಂತೆ ಸಲಹೆ ಮಾಡಲಾಗಿತ್ತು. ಆದರೆ ಈ ಸಲಹೆಯನ್ನು ಚೀನ ಕಡೆಗಣಿಸಿದ ಕಾರಣ ಇಂದು ವಿಶ್ವವೇ ಪರಿತಪಿಸುವಂತಾಗಿದೆ.
ಈ ಸಂಶೋಧನೆಗೆ ಸಂಬಂಧಿಸಿದಂತೆ 2007 ರಲ್ಲಿ ಪ್ರಕಟಗೊಂಡ ‘ ಅಮೇರಿಕನ್ ಸೊಸೈಟಿ ಆಫ್ ಮೈಕ್ರೊಬಯಾಲಜಿ’ ಜರ್ನಲ್ ಅನ್ನು ಮೈಸೂರು ವಿಶ್ವವಿದ್ಯಾನಿಲಯದ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಎಸ್. ವಿಶ್ವನಾಥ್ , ಜಸ್ಟ್ ಕನ್ನಡ ಡಾಟ್ ಇನ್ ಗೆ ನೀಡಿದ್ದಾರೆ. ಒಟ್ಟಾರೆ ಈ ವರದಿಯಲ್ಲಿ ಹೇಳಿರುವುದಿಷ್ಟು……
ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ವೈರಸ್ಗಳಿಂದ ಉಂಟಾಗುತ್ತದೆ ಮತ್ತು ರೋಗ ಪೀಡಿತರು ಯಾರಾದರೂ ಕೆಮ್ಮಿದಾಗ, ಸೀನುವಾಗ ಅಥವಾ ಮಾತನಾಡುವಾಗ ಗಾಳಿಯನ್ನು ಪ್ರವೇಶಿಸಿ ಆ ಮೂಲಕ ಇತರರಿಗೂ ಹರಡುತ್ತದೆ. ಕರೋನ ವೈರಸ್ (SARS-CoV) ಅತ್ಯಂತ ಅಪಾಯಕಾರಿ. 2003 ರ ವರೆಗೆ, ಕೇವಲ 12 ಬಗೆಯ ಪ್ರಾಣಿ ಅಥವಾ ಮಾನವ ಕರೋನಾ ವೈರಸ್‌ಗಳ ಬಗ್ಗೆ ಮಾತ್ರ ತಿಳಿದುಬಂದಿತ್ತು.
ಆದರೆ, 2003 ರಲ್ಲಿ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ, ಪುನುಗು ಬೆಕ್ಕು ಮತ್ತು ಬಾವಲಿ ( ಸಿವೆಟ್ ಮತ್ತು ಬ್ಯಾಟ್ ) ಗಳಲ್ಲಿ SARS-CoV ವೈರಸ್ ಇರುವುದು ಪತ್ತೆಯಾಯಿತು.
ಹಾರ್ಸ್‌ಶೂ ಬಾವಲಿಗಳು SARS-CoV ತರಹದ ವೈರಸ್‌ನ ನೈಸರ್ಗಿಕ ಆವಾಸ ಸ್ಥಾನವಾಗಿದೆ. ಈ ಸಂಶೋಧನೆಗಳು ದಕ್ಷಿಣ ಚೀನಾದ ಹೊಲಗಳು ಮತ್ತು ವೆಟ್ ಮಾರುಕಟ್ಟೆಗಳಲ್ಲಿ (ಮೀನು, ಕೋಳಿ, ಮಾಂಸಗಳ ಜತೆಗೆ ಜೀವಂತ ಪ್ರಾಣಿಗಳ ಮಾರುಕಟ್ಟೆ) ವನ್ಯಜೀವಿ ಮತ್ತು ಜೈವಿಕ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸಲಾಗಿತ್ತು. ಜತೆಗೆ ಇದು ಹೊಸ SARS-CoV ಸೋಂಕುಗಳಿಗೆ ಮೂಲ ಮತ್ತು ವರ್ಧನೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಬಗೆಗೆ ಎಚ್ಚರಿಸಲಾಗಿತ್ತು.
ದಕ್ಷಿಣ ಚೀನಾದಲ್ಲಿ ವನ್ಯಜೀವಿ ಮಾರುಕಟ್ಟೆ ಪುನರಾರಂಭಗೊಂಡ ನಂತರ 2003 ರ ಉತ್ತರಾರ್ಧದಲ್ಲಿ SARS ನ ಸಣ್ಣ ಪುನರುಜ್ಜೀವನ ಮತ್ತು ಕುದುರೆಗಾಲಿನ ಬಾವಲಿಗಳಲ್ಲಿ (ಹಾರ್ಸ್ ಶೂ ಬ್ಯಾಟ್ ) ಈ ರೀತಿಯ ವೈರಸ್ ಪತ್ತೆಯಾದದನ್ನು ಉಲ್ಲೇಖಿಸಲಾಗಿತ್ತು. ಜತೆಗೆ ಬ್ಯಾಟ್ SARS-CoV ವೈರಸ್, ರೂಪಾಂತರ ಮತ್ತು ಪರಿಸ್ಥಿತಿಗಳಿಗೆ ಸರಿಹೊಂದಿದರೆ ಹೆಚ್ಚಿನ ಪ್ರಮಾಣದಲ್ಲಿ ಹೊರ ಹೊಮ್ಮುವ ಬಗೆಗೂ ತಿಳಿಸಲಾಗಿತ್ತು.
ಹಾರ್ಸ್‌ಶೂ ಬಾವಲಿಗಳಲ್ಲಿ ಎಸ್‌ಎಆರ್ಎಸ್-ಕೋವಿ ತರಹದ ವೈರಸ್‌ಗಳ ದೊಡ್ಡ ಪ್ರಮಾಣದಲ್ಲಿ ಉಪಸ್ಥಿತಿಯಲ್ಲಿದ್ದು, ದಕ್ಷಿಣ ಚೀನಾದ ವಿಲಕ್ಷಣ ಸಸ್ತನಿಗಳನ್ನು ತಿನ್ನುವ ಸಂಸ್ಕೃತಿಯೊಂದಿಗೆ ತಳುಕು ಹಾಕಿದ ವಿಜ್ಞಾನಿಗಳು, ಚೀನಿಯರಿಗೆ ಇದೊಂದು ‘ ಟೈಮ್ ಬಾಂಬರ್ ‘ ಇದ್ದಂತೆ. ಮುಂದೊಂದು ದಿನ ಯಾವುದೇ ಸಮಯದಲ್ಲದಾರು ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದರು. ಆದರೆ ಈ ಎಚ್ಚರಿಕೆಯನ್ನು ಚೀನಾದವರು ಕಡೆಗಣಿಸಿದ ಕಾರಣ ಈಗ ಪರಿಸ್ಥಿತಿ ಬಿಗಡಾಯಿಸಿದೆ.
ಈಗ ಈ ವೈರಾಣುವಿನ ಟೈಮ್ ಬಾಂಬ್ ಸ್ಫೋಟಗೊಂಡಿದೆ ಮತ್ತು ಅದು ಚೀನಾದಿಂದ ಹೊರ ದೇಶಕ್ಕೂ ವ್ಯಾಪಿಸಿದೆ. ಸೋಂಕು ಸಾಂಕ್ರಾಮಿಕ ಮತ್ತು ನಿಧಾನವಾಗಿ ಭಾರತದಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ (WHO) ಘೋಷಿಸಿದೆ.
ಕೆಟ್ಟ ಆಹಾರ ಪದ್ಧತಿ ಕಾರಣ :
ಕರೋನಾ ವೈರಸ್ ದಾಳಿಗೆ ಸಂಬಂಧಿಸಿದಂತೆ ಹಲವಾರು ಉಹಾಪೋಹ ಕೇಳಿ ಬರುತ್ತಿದೆ. ಈ ಬಗ್ಗೆ ಮೈಸೂರು ವಿವಿ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎಸ್. ವಿಶ್ವನಾಥ್ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿ ಹೇಳಿದಿಷ್ಟು.
ಕರೋನಾ ಭೀತಿಗೆ ಪ್ರಮುಖ ಕಾರಣ ‘ ಬಯೋಲಾಜಿಕಲ್ ವಾರ್ ಫೇರ್’ . ಚೀನಿಯರೇ ಇದನ್ನು ಹೊರ ಹಾಕಿರುವುದು ಎಂಬುದು ಬಹುತೇಕರ ವಾದ. ಆದರೆ ಇದು ನಿಜವಲ್ಲ. ಒಂದುವರೆ ದಶಕಗಳ ಹಿಂದೆಯೇ ಈ ಬಗ್ಗೆ ಎಚ್ಚರಿಸಲಾಗಿತ್ತು. ಬಾವಲಿ ತಿನ್ನದಂತೆ ಚೀನಿಯರಿಗೆ ಸಲಹೆ ನೀಡಲಾಗಿತ್ತು. ಆದರೆ ಅವರು ಇದನ್ನು ಕಡೆಗಣಿಸಿದ ಕಾರಣ ಈಗ ಈ ಪರಿಸ್ಥಿತಿ ಎದುರಾಗಿದೆ. ಚೀನಿಯರ ಕೆಟ್ಟ ಆಹಾರ ಕ್ರಮವೇ ಸಮಸ್ಯೆಗೆ ಮೂಲ.
ಯಾವುದೇ ವೈರಸ್‌ಗಳಂತೆ ಕರೋನಾ ವೈರಸ್‌ಗಳಿಗೂ ಸಹ ಅದರ ವೃದ್ಧಿಗೆ ಹೋಸ್ಟ್ (ಅತಿಥೇಯ) ಅಗತ್ಯವಿರುತ್ತದೆ. ಆತಿಥೇಯರ ಅನುಪಸ್ಥಿತಿಯಲ್ಲಿ ವೈರಸ್ ಮಸುಕಾಗುತ್ತದೆ ಮತ್ತು 13 ಗಂಟೆಗಳಿಗಿಂತ ಹೆಚ್ಚು ಹೊರಗೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಜನತಾ ಕರ್ಫ್ಯೂ ಸೋಂಕಿನ ಸರಪಳಿಯನ್ನು ಮುರಿಯಲು ಉತ್ತಮ ಲೆಕ್ಕಾಚಾರದ ಕ್ರಮವಾಗಿದೆ ಎಂದರು.
KEY WORDS : chines bad food habit responsible for corona out break- The University of Hong Kong-warns in 2007-Civet.Bat-chines-food-habit
ENGLISH SUMMARY :
Severe acute respiratory syndrome (SARS) is caused by viruses and transmitted through droplets that enter the air when someone with the disease coughs, sneezes or talks. Most dangerous one is coronavirus (SARS-CoV). Earlier to 2003, only 12 different types of animal or human corona viruses were known.
In the year 2003 scientist discovered SARS-CoV virus in wild animals such as Civet and Bat. The number of corona viruses in many animal species has been increased to at least 36. It has been found that horseshoe bats are the natural reservoir for SARS- CoV-like virus and that civets are the amplification host. These findings highlight the importance of wildlife and bio-security in farms and wet markets of Southern China, which can serve as the source and amplification centers for emerging new SARS-CoV infections.
The small reemergence of SARS in late 2003 after the resumption of the wildlife market in Southern China and the discovery of a very similar virus in horseshoe bats, bat SARS-CoV, suggested that SARS can return if conditions are fit for the introduction, mutation, amplification and transmission of this dangerous virus.
The presence of a large reservoir of SARS-CoV-like viruses in horseshoe bats together with the culture of eating exotic mammals in Southern China Scientist have warned Chinese that they have a time bomb which is ticking. Now this time bomb is exploded and it is out of China as well. WHO declared that the infection is pandemic and is slowly spreading in India.
Like any viruses corona viruses also requires a host for its multiplications. In the absence of host the virus will fade away and cannot survive outside more than 13 hours. So Janatha Karfu is a very good calculative move to break the infection chain.