ಚಿನ್ಮೋಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್‌ : ವಿಷಾಧಿಸಿದ ಕೋಲ್ಕತ್ತಾ ಇಸ್ಕಾನ್ .

Bangladesh Court Rejects Bail To Jailed Hindu Monk Chinmoy Krishna Das

 

ನವದೆಹಲಿ, ಜ.೦೨,೨೦೨೫: 2024 ರ ನವೆಂಬರ್ 25 ರಂದು ಬಾಂಗಾದೇಶದಲ್ಲಿ ಬಂಧಿಸಲ್ಪಟ್ಟ ಇಸ್ಕಾನ್ ಮಾಜಿ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಜಾಮೀನು ನೀಡಲು ಬಾಂಗ್ಲಾದೇಶದ ನ್ಯಾಯಾಲಯ ಗುರುವಾರ ನಿರಾಕರಿಸಿದೆ.

ಚಿನ್ಮಯ್ ಕೃಷ್ಣ ಅವರ ಜಾಮೀನು ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ನ 11 ವಕೀಲರ ನ್ಯಾಯಪೀಠ ಇಂದು ಭಾಗವಹಿಸಿದ ನಂತರ ಈ ತೀರ್ಪು ಹೊರಬಿದ್ದಿದೆ.

ಇಸ್ಕಾನ್‌ ನಿರಾಸೆ:

ಚಟ್ಟೋಗ್ರಾಮ್‌ನ ನ್ಯಾಯಾಲಯವು ಮಾಜಿ ಇಸ್ಕಾನ್ ನಾಯಕ ಚಿನ್ಮೋಯ್ ಕೃಷ್ಣ ದಾಸ್‌ಗೆ ಜಾಮೀನು ನೀಡಲು ನಿರಾಕರಿಸಿದ ನಂತರ, ಕೋಲ್ಕತ್ತಾ ಇಸ್ಕಾನ್ ಉಪಾಧ್ಯಕ್ಷ ರಾಧಾ ರಮಣ್ ದಾಸ್  ನಿರಾಶೆ ವ್ಯಕ್ತಪಡಿಸಿದ್ದಾರೆ, ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಅವರ ಬಿಡುಗಡೆಯನ್ನು ಜಗತ್ತು ನಿರೀಕ್ಷಿಸಿತ್ತು ಎಂದಿರುವ ಅವರು,

“ವಿವರವಾದ ಆದೇಶವನ್ನು ನೋಡಿದ ನಂತರ, ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲು ನಿಖರವಾದ ಕಾರಣ ತಿಳಿಯಲಿದೆ. ಇಡೀ ಜಗತ್ತು ಈ ವಿಷಯದತ್ತ ನೋಡುತ್ತಿದೆ — ಬ್ರಿಟಿಷ್ ಸಂಸತ್ತು ಮತ್ತು ಅಮೆರಿಕದ ರಾಜಕಾರಣಿಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು ಮತ್ತು ಎಲ್ಲರೂ ಅವರ ಬಂಧನದಿಂದ ಚಿಂತಿತರಾಗಿದ್ದರು ಎಂದು ವಿಷಾಧಿಸಿದರು.

KEY WORDS: Bangladesh, Court, Rejects Bail, Hindu Monk, Chinmoy Krishna Das

SUMMARY:

Bangladesh Court Rejects Bail To Jailed Hindu Monk Chinmoy Krishna Das