ಕೊಟ್ಟ ಭರವಸೆ ಈಡೇರಿಸದ ಬಿಜೆಪಿ: ರಾಜ್ಯಕ್ಕೆ ಮೋದಿ ಕೊಟ್ಟಿರೋದು ಖಾಲಿ ಚೊಂಬು- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಚಿತ್ರದುರ್ಗ,ಏಪ್ರಿಲ್,23,2024 (www.justkannada.in):  ನಾವು ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ. ಆದರೆ ಬಿಜೆಪಿ ಕೊಟ್ಟಿರುವ ಭರವಸೆಗಳನ್ನ ಈಡೇರಿಸಿಲ್ಲ. ರಾಜ್ಯಕ್ಕೆ ಪ್ರಧಾನಿ ಮೋದಿ ಕೊಟ್ಟಿರೋದು ಬರೀ ಖಾಲಿ ಚೊಂಬು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಪರ ಮತಯಾಚಿಸಿದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2018ರಲ್ಲಿ ನಾವು 165 ಭರವಸೆ ಕೊಟ್ಟಿದ್ದವು. ಆ ಪೈಕಿ 158 ಭರವಸೆ ಈಡೇರಿಸಿದ್ದೇವೆ. ನಾವು ರಾಜ್ಯದ ಜನರ ನಂಬಿಕೆಯನ್ನ ಉಳಿಸಿಕೊಂಡಿದ್ದೇವೆ ಬಿಜೆಪಿಯವರು ಚುನಾವಣೆ ವೇಳೆ 600 ಭರವಸೆ ನೀಡಿದ್ದರು. ಆದರೆ 60 ಭರವಸೆಯನ್ನೂ ಈಡೇರಿಸಲಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು ಹಾಕಲಿಲ್ಲ.  2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆ ಎಂದಿದ್ದರು. 20 ಲಕ್ಷ ಉದ್ಯೋಗ ಸೃಷ್ಠಿಸಿಲು ಆಗಲಿಲ್ಲ.  ವಿದೇಶದಲ್ಲಿ ಕಪ್ಪು ಹಣ ತರುತ್ತೇವೆ ಅಂದಿದ್ದರು. ತರಲಿಲ್ಲ. ಈಗ ಗ್ಯಾಸ್ ಸಿಲಿಂಡರ್ ಬೆಲೆ 950 ರೂ ಆಗಿದೆ. ಅಡುಗೆ ಎಣ್ಣೆ ಪೆಟ್ರೋಲ್, ಡೀಸೆಲ್ ರಸಗೊಬ್ಬರ ಬೆಲೆ ಹೆಚ್ಚಾಗಿದೆ.  ಅಚ್ಚೇದಿನ್ ಬಂತಾ ಮೋದಿ ಜೀ ಹೇಳಿ ಎಂದು ಟಾಂಗ್ ಕೊಟ್ಟರು.

ಕರ್ನಾಟಕಕ್ಕೆ ಮೋದಿ ಕೊಟ್ಟಿರೋದು ಖಾಲಿ ಚೊಂಬು.  ಈಗ ಮೋದಿ, ದೇವೇಗೌಡರು ಒಂದಾಗಿದ್ದಾರೆ.  ಸೋಲಿನ ಭಯದಿಂದ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

Key words: Chitradurga, CM Siddaramaiah, Priyank Gandhi