ಚಿತ್ರದುರ್ಗ,ಅಕ್ಟೋಬರ್,22,2020(www.justkannada.in): ಸರ್ಕಾರದಿಂದ ಮಂಜೂರಾಗಿದ್ದ MSIL ಅಂಗಡಿಗೆ NOC ನೀಡಲು ವಿಳಂಬ ಹಿನ್ನಲೆ, ಅಬಕಾರಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅಬಕಾರಿ ಕಚೇರಿ ಎದುರೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೂಳಿಹಟ್ಟಿ ಶೇಖರ್ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಈ ನಡುವೆ ಹೊಸದುರ್ಗ ಪಟ್ಟಣ ಹಾಗೂ ಶ್ರೀರಾಂಪು ಗ್ರಾಮಕ್ಕೆ MSIL ಮಂಜೂರಾಗಿತ್ತು. ಆದರೆ ಇದಕ್ಕೆ ಕಳೆದ 8 ತಿಂಗಳಿಂದ NOC ನೀಡದೆ, ಶಾಸಕರಿಗೆ ಸ್ಪಂದಿಸದೆ ಅಬಕಾರಿ ಡಿಸಿ ನಿರ್ಲಕ್ಷ ತೋರಿದ್ದರು ಎನ್ನಲಾಗಿದೆ.
ಅಬಕಾರಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಶಾಸಕ ಗೂಳಿಹಟ್ಟಿ ಶೇಖರ್ ಚಿತ್ರದುರ್ಗ ನಗರದ ಅಬಕಾರಿ ಡಿಸಿ ಕಚೇರಿ ಬಾಗಿಲ ಮುಂದೆ ಕುಳಿತು ಧರಣಿ ನಡೆಸುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಶಾಸಕರು ಧರಣಿ ಕುಳಿತ ವಿಷಯ ತಿಳಿದು ಅಬಕಾರಿ ಡಿಸಿ ನಾಗಶಯನ ಸ್ಥಳಕ್ಕೆ ದೌಡಾಯಿಸಿದ್ದು, ಕೂಡಲೇ ಕೆಲಸ ಮಾಡುವುದಾಗಿ ಹೇಳಿ ಶಾಸಕ ಗೂಳಿಹಟ್ಟಿ ಶೇಖರ್ ಬಳಿ ಕ್ಷಮೆ ಕೇಳಿದ್ದಾರೆ. ಅಬಕಾರಿ ಡಿಸಿ ಅಬಕಾರಿ ಡಿಸಿ ಕ್ಷಮೆ ಕೇಳಿದ ಬಳಿಕ ಗೂಳಿಹಟ್ಟಿ ಶೇಖರ್ ಧರಣಿ ಕೈಬಿಟ್ಟರು.
Key words: chitradurga- MLA-Gulihatti Shekhar in front – Excise- DC office-protest