ಮೈಸೂರಿಗೆ ಚಿತ್ರನಗರಿ: ಸಿಎಂ ಮತ್ತು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್…

ಮೈಸೂರು,ಮಾರ್ಚ್,18,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆಗೆ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹಾಗೂ ಸಚಿವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್  ಕೃತಜ್ಞತೆ ಸಲ್ಲಿಸಿದ್ದಾರೆ.jk

ಈ ಕುರಿತು ಪ್ರಕಟಣೆ ಹೊರಡಿಸಿರುವ ಹೆಚ್.ವಿ ರಾಜೀವ್, ಮೈಸೂರು ನಗರಕ್ಕೆ ಚಿತ್ರನಗರಿಯನ್ನು ಸ್ಥಾಪಿಸಲು ನಿರ್ಣಯಿಸಿದ  ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಗೆ  ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ವಾರ್ತಾ ಸಚಿವ ಸಿ.ಪಾಟೀಲ್ ಅವರಿಗೆ ಹಾಗೂ ಸರ್ಕಾರದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಪಾರಂಪರಿಕ ನಗರದಲ್ಲಿ ಈ ಹಿಂದೆ ಚಿತ್ರನಗರಿ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದ್ದರೂ, ಕಾಲ ಕಳೆದ ನಂತರ ಚಿತ್ರನಗರಿಯನ್ನು ಬೇರೆ ಸ್ಥಳಗಳಲ್ಲಿ ನಿರ್ಮಿಸುವ ಬಗ್ಗೆ ಚರ್ಚೆಗಳು ನಡೆದಿತ್ತು. ಆದಾಗ್ಯೂ ಚಿತ್ರನಗರ ಸ್ಥಾಪಿಸಲು ಕರ್ನಾಟಕದಲ್ಲಿ ಮೈಸೂರಿಗಿಂತ ಹೆಚ್ಚಿನ ಪ್ರಶಸ್ತವಾದ ಸ್ಥಳ ಮತ್ತೊಂದು ಇಲ್ಲವೆಂದು ಮುಖ್ಯಮಂತ್ರಿಗಳು ಹಾಗೂ ಇತರರಿಗೆ ಯಶಸ್ವಿಯಾಗಿ ಮನವರಿಕೆ ಮಾಡಿದ್ದು  ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಸೋಮಶೇಖರ್ ಮತ್ತು ಕರ್ನಾಟಕ ರಾಜ್ಯ ಭಾ.ಜ.ಪ ಉಪಧ್ಯಾಕ್ಷರಾದ ಬಿ.ವೈವಿಜಯೇಂದ್ರ ಅವರಿಗೆ ಹೃತ್ತೋರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೆಚ್.ವಿ ರಾಜೀವ್ ತಿಳಿಸಿದ್ದಾರೆ.

ಮೈಸೂರು ನಗರದ ಸುತ್ತುಮುತ್ತಲಿನ ಪರಿಸರ ಚಿತ್ರನಗರಿಗೆ ಪೂರಕವಾಗಿದ್ದು, ಆರಮನೆಗಳ ನಗರ. ಪಾರಂಪರಿಕ ನಗರ, ಪ್ರಾಕೃತಿಕ ನದಿಗಳ ನಗರ ಮತ್ತು ನೈಸರ್ಗಿಕ ಅರಣ್ಯ ಸಂಪತ್ತು ಹೊಂದಿರುವ ನಗರವಾಗಿದ್ದು, ಕಳೆದ 6-7 ದಶಕಗಳಿಂದ ಮೈಸೂರು ನಗರನ್ನು ಚಿತ್ರಿಕರಣಕ್ಕೆ ಅಚ್ಚುಮೆಚ್ಚಿನ ನಗರವಾಗಿದೆ. ಹಲವು ಕಾರಣಗಳಿಂದಾಗಿ ಮೈಸೂರು ನಗರದ ಹೊರತಾಗಿ ಬೇರೆ ನಗರಗಳ ಆಸುಪಾಸಿನಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಪ್ರಯತ್ನ ನಡೆದ ಸನ್ನಿವೇಶದಲ್ಲಿ, ಮೈಸೂರು ನಗರದ ಶಾಸಕರಾದ ಎಸ್.ಎ.ರಾಮದಾಸ್, ಎಂ.ನಾಗೇಂದ್ರ,  ಹರ್ಷವರ್ಧನ ರವರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಮತ್ತು ವಿ.ಶ್ರೀನಿವಾಸ್ ಪ್ರಸಾರ ರವರು ಭಾ.ವಿ.ಪ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚಿತ್ರನಗರಿಯನ್ನು ಮೈಸೂರಿನಲ್ಲಿಯೇ ಪ್ರಾರಂಭಿಸಬೇಕೆಂಬ ಕೂಗನ್ನು ಆಲಿಸಿದ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಮತ್ತು ಕರ್ನಾಟಕ ರಾಜ್ಯ ಭಾ.ಜ.ಪ ಉಪಧ್ಯಾಕ್ಷರಾದ ಬಿವೈಎವೇಂದ್ರ ರವರು ಚಿತ್ರನಗರಿಯ ಸ್ಥಾಪನೆಯ wod ಹಾಗೂ ಮೈಸೂರು ನಗರದ ವಿಶೇಷತೆಯನ್ನು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ರವರ ಮುಂದೆ ಸಮರ್ಥವಾಗಿ ಮಂಡಿಸಿ, ಎಲ್ಲರೂ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಮೈಸೂರು ನಗರಕ್ಕೆ ಚಿತ್ರನಗರಿ ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.Chitranagari - Mysore-Muda president -HV Rajeev –thanked- CM - minister

ಮೈಸೂರು ಅರಮನೆ ಚಾಮುಂಡಿ ಬೆಟ್ಟ  ಮೃಗಾಲಯ. ಪಾರಂಪರಿಕ ಕಟ್ಟಡಗಳು, ಮೈಸೂರು ವಿವಿ  (ಮಾನಸಗಂಗೋತ್ರಿ, ಬೃಂದಾವನ  ಗಾರ್ಡನ್(ಕೆ.ಆರ್.ಎಸ್), ಆಣೆಕಟ್ಟೆ, ರಾಷ್ಟ್ರಕವಿ ಕುವೆಂಪುರವರ ನಿವಾಸ, ವ್ಯಂಗ್ಯಚಿತ್ರಗಾರ ದಿವಂಗತ ಆರ್.ಕೆ.ನಾರಾಯಣರವರ ನಿವಾಸ, ವ್ಯಾಕ್ಸ್ ಮ್ಯೂಸಿಯಮ್ ನಂಜನಗೂಡು. ಶ್ರೀರಂಗಪಟ್ಟಣ ರಂಗನಾಥ ದೇವಾಲಯ, ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುತ್ತೂರು, ಬಂಡೀಪುರ ಮತ್ತು ನಾಗರಹೊಳೆ ವನ್ಯ ಮೃಗ ತಾಣಗಳು, ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತಗಳು, ಕೊಡಗಿನ ತಲಕಾವೇರಿ, ಭಾಗಮಂಡಲ ಮತ್ತು ಇತರ ಸ್ಥಳಗಳು ಚಲನಚಿತ್ರ ನಿರ್ಮಾಣಕ್ಕೆ ನೈಸರ್ಗಿಕವಾಗಿ ಅನುಕೂಲಕರವಾಗಿರುವುದರಿಂದ, ಮೈಸೂರು ನಗರಕ್ಕೆ ಚಿತ್ರನಗರಿಯು ನ್ಯಾಯಯುತವಾಗಿ ಸಂದ ಗೌರವಾಗಿರುತ್ತದೆಂದು ತಿಳಿಸಲು  ಸಂತಸಪಡುತ್ತೇನೆ ಎಂದು ಹೆಚ್.ವಿ ರಾಜೀವ್ ತಿಳಿಸಿದ್ದಾರೆ.

ENGLISH SUMMARY….

Film City in Mysuru: MUDA Chairman H.V. Rajeev thanks CM and Minister
Mysuru, Mar. 18, 2021 (www.justkannada.in): Following the State Government’s decision to establish the film city in the cultural city Mysuru, Mysore Urban Development Authority Chairman H.V. Rajvi has thanked Chief Minister B.S. Yedyurappa and the Minister concerned.
Expressing his gratitude to the Chief Minister in a press release, H.V. Rajiv mentioned though earlier it was mentioned that the Film City would be established in Mysuru, a proposal of shifting it to other places was making rounds. However, the role of Minister for Cooperation in convincing the Chief Minister to establish the Film City in Mysuru as it is the most ideal place has been successful. Hence, I wholeheartedly thank Mysuru District In-charge Minister and Cooperation Minister S. Somashekar and BJP Vice President B. Vijendra.
Keywords: MUDA Chairman H.V. Rajiv/ Film City/ Mysuru/ Thanks CM/ District In-charge Minister

Key words: Chitranagari – Mysore-Muda president -HV Rajeev –thanked- CM – minister