ಮೈಸೂರು,ಮಾರ್ಚ್,7,2022(www.justkannada.in): ಮೈಸೂರು ರೈಲ್ವೆ ಕ್ವಾಟ್ರಸ್ ನಲ್ಲಿ ಕ್ಲೋರಿನೇಷನ್ ಲೀಕ್ ಆಗಿ ಐದಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಇಂದು ನಡೆದಿದೆ.
ಮೈಸೂರಿನ ಯಾದವಗಿರಿಯಲ್ಲಿರುವ ರೈಲ್ವೆ ಕ್ವಾಟ್ರಸ್ ನಲ್ಲಿ 3 ಗಂಟೆ ಸಮಯದಲ್ಲಿ ಕ್ಲೋರಿನೇಷನ್ ಲೀಕ್ ಆಗಿದೆ. ಈ ವೇಳೆ ಅಸ್ವಸ್ಥರಾದವರನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಲೋರಿನೇಷನ್ ಲೀಕ್ ನಿಂದ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮೈಸೂರು-ಕೆ ಆರ್ ಎಸ್ ರಸ್ತೆ ಬಂದ್ ಮಾಡಲಾಗಿದ್ದು ರೈಲ್ವೆ ಕ್ವಾಟ್ರಸ್ ಗೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೆಲ ಕಾಲ ರೈಲ್ವೆ ಕ್ವಾಟ್ರಸ್ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ನಾಲ್ಕೈದು ಅಗ್ನಿಶಾಮಕ ವಾಹನ ಆಗಮಿಸಿ ಕ್ಲೋರಿನೇಷನ್ ಮೇಲೆ ನೀರು ಹಾಕಿದ್ದು, ಲೀಕೆಜ್ ಮುಚ್ಚಿದ್ದಾರೆ ಎನ್ನಲಾಗಿದೆ.
Key words: Chlorination-leak –Mysore