ಮೈಸೂರು, ಸೆ.09,2024: (www.justkannada.in news) ಕಲಾವಿದರ ಕ್ರಿಯೇಟಿವಿಟಿಗೆ ಬಹಳಷ್ಟು ಅವಕಾಶಗಳನ್ನು ಒದಗಿಸುತ್ತಾನೆ ನಮ್ಮ ಡೊಳ್ಳು ಹೊಟ್ಟೆ ಗಣಪ. ಗಣೇಶನ ಹಬ್ಬ ಬಂತು ಅಂದ್ರೆ ಸಾಕು ಗಣೇಶನ ಮೂರ್ತಿಯ ವಿರಾಟ ದರ್ಶನ ನೋಡಬಹುದು.
ಪ್ರಚಲಿತ ವಿದ್ಯಾಮಾನಕ್ಕೆ ತಕ್ಕಂತೆ ಗಣೇಶನ ಮಣ್ಣಿನ ಮೂರ್ತಿಯನ್ನು ಸಿದ್ಧಪಡಿಸುವ ಕ್ರಿಯೇಟಿವಿ ಕಲಾವಿದರ ಗುಂಪು ಇದೆ. ಗಾಂಧಿ ಜತೆ, ಅಣ್ಣಾವ್ರು, ಮೋದಿ, ವೀರಪ್ಪನ್, ಅಬ್ದುಲ್ ಕಲಾಂ…ಹೀಗೆ ನಾನಾ ವ್ಯಕ್ತಿಗಳ ಜತೆ ಗಣೇಶ ಮೂರ್ತಿಯನ್ನು ನೋಡಿದ್ದೇವೆ.
ಆದರೆ ಇಲ್ಲೊಂದು ವಿಭಿನ್ನ ಗಣೇಶ ಗಮನ ಸೆಳೆಯುತ್ತಿದ್ದಾನೆ, ಜತೆಗೆ ಮಕ್ಕಳ ಬಾಯಲ್ಲಿ ನಿರೂರಿಸುತ್ತಿದ್ದಾನೆ. ಅದು ಯಾವ ಗಣೇಶ ಅಂತೀರಾ…
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಯಮ್ಮಿ ಜಂಕ್ಷನ್ ಬೇಕರಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ 40 ಕೆಜಿ ಚಾಕಲೇಟ್ ಬಳಸಿ ಗಣೇಶನನ್ನು ರೂಪಿಸಿ ಪ್ರತಿಷ್ಠಾಪಿಸಲಾಗಿದೆ . ಇದೇ ಬುಧವಾರ ಗಣಪನ ವಿಸರ್ಜನೆಯ ಸಮಯದಲ್ಲಿ ಚಾಕಲೇಟ್ ಗಣೇಶನನ್ನು ಹಾಲಿನಲ್ಲಿ ಮುಳುಗಿಸಿ ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ.
ಚಾಕೊಲೇಟ್ ಗಣೇಶನನ್ನು ತಯಾರಿಸಿದ ಯಮ್ಮಿ ಜಂಕ್ಷನ್ ಮಾಲೀಕರಾದ ಚೈತ್ರ ಅವರನ್ನು ಮಾಜಿ ಕಾರ್ಪೋರೇಟರ್ ಪ್ರಮೀಳಾ ಭರತ್ ಅಭಿನಂದಿಸಿದರು.
key words: Mouthwatering, CHOCOLATE, Ganapati, of Mysore.