ಮೈಸೂರು,ಡಿ,23,2019(www.justkannada.in): ಡಿಸೆಂಬರ್ 25 ರಂದು ಕ್ರಿಸ್ ಮಸ್ ಹಬ್ಬ ಹಿನ್ನೆಲೆ,ಕ್ರಿಸ್ಮಸ್ ಕ್ರೈಸ್ತರಿಗೆ ಮಾತ್ರವಲ್ಲ. ಮನುಕುಲಕ್ಕೆ ಸಂತೋಷ , ಶಾಂತಿ , ಸಮಾಧಾನ ತರುವ ಹಬ್ಬವಾಗಿದೆ. ನಾವೆಲ್ಲರೂ ಸ್ವಾರ್ಥವೆಂಬ ಕತ್ತಲನ್ನು ತೊರೆಯೋಣ. ಪ್ರತಿಯೊಬ್ಬ ಮಾನವನಲ್ಲಿಯೂ ದೇವರ ರೂಪವನ್ನು ಕಾಣೋಣ ಎಂದು ಮೈಸೂರಿನ ಕ್ರೈಸ್ತ ಧರ್ಮಾಧ್ಯಕ್ಷ ಕೆ.ಎ.ವಿಲಿಯಮ್ಸ್ ಸಂದೇಶ ಸಾರಿದರು.
ನಗರದ ಬಿಷಪ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ರಿಸ್ ಮಸ್ ಹಬ್ಬದ ಸಂದೇಶ ಸಾರಿದ ಮೈಸೂರಿನ ಕ್ರೈಸ್ತ ಧರ್ಮಾಧ್ಯಕ್ಷ ಕೆ..ಎ.ವಿಲಿಯಮ್ಸ್ , ಕ್ರಿಸ್ಮಸ್ ಕ್ರೈಸ್ತರಿಗೆ ಮಾತ್ರವಲ್ಲ. ಮನುಕುಲಕ್ಕೆ ಸಂತೋಷ , ಶಾಂತಿ , ಸಮಾಧಾನ ತರುವ ಹಬ್ಬವಾಗಿದೆ. ಇಂದು ಅತೀ ಅಗತ್ಯವಾಗಿರುವ ಶಾಂತಿಯ ಅರಸರಾಗಿ ಪ್ರಭುಕ್ರಿಸ್ತರನ್ನು ಅವರ ಮುಂಚಿತವಾಗಿಯೇ ಘೋಷಿಸಲಾಗಿತ್ತು. ಶಾಂತಿಗಾಗಿಯೇ ಮನುಜರಾಗಿ ಪ್ರಭು ಕ್ರಿಸ್ತ ಅವತರಿಸಿದರು. ಇಂದು ಜಗತ್ತಿನೆಲ್ಲೆಡೆ ಹಿಂಸೆ,ಅಶಾಂತಿ ತುಂಬಿದ್ದು ಶಾಂತಿಗಾಗಿ ಹಾಹಾಕಾರವೆದ್ದಿದೆ. ನ್ಯಾಯವಿದ್ದಲ್ಲಿ ಶಾಂತಿಯಿರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಗೌರವಿಸಲ್ಪಟ್ಟಾಗ, ಪ್ರತಿಯೊಬ್ಬರ ಹಕ್ಕುಗಳನ್ನು ಪರಿಗಣಿಸಿದಾಗ. ನಿಜವಾದ ಸಹೋದರತೆ ಬೆಳೆಯುತ್ತದೆ. ಇದಕ್ಕೆ ತಡೆಯಾಗಿರುವ ಅಹಂ , ಸ್ವಾರ್ಥಗಳು ದೂರವಾದಾಗ ಎಲ್ಲೆಡೆ ಶಾಂತಿ,ಸಂತಸ ಸಮಾಧಾನಗಳು ತುಂಬುತ್ತವೆ. ಇಂತಹ ಮಾನವೀಯ ಮೌಲ್ಯಗಳಿಗೆ ಕರೆ ನೀಡುವುದೇ ಕ್ರಿಸ್ ಮಸ್ ನೀಡುವ ಸಂದೇಶ. ನಾವೆಲ್ಲರೂ ಸ್ವಾರ್ಥವೆಂಬ ಕತ್ತಲನ್ನು ತೊರೆಯೋಣ. ಪ್ರತಿಯೊಬ್ಬ ಮಾನವನಲ್ಲಿಯೂ ದೇವರ ರೂಪವನ್ನು ಕಾಣೋಣ. ಈ ಕ್ರಿಸ್ತ ಜಯಂತಿಯು ಸರ್ವರಿಗೂ ಶಾಂತಿ ಸಹೋದರತೆಯ ಹೊಸ ಭರವಸೆಯನ್ನು ತರಲಿ, ನಿಜ ಮನುಷ್ಯರಾಗಲೂ ಪ್ರೇರಣೆಯಾಗಲಿ ಎಂದು ತಿಳಿಸಿದರು.
Key words: Christmas -message – people- Mysore-Christian Mosque -KA WILLIAMS,