ಹುಬ್ಬಳ್ಳಿ,ಜ,18,2020(www.justkannada.in): ಸಿಎಎ ಎಂಬುದು ಅಲ್ಪಸಂಖ್ಯಾತರಿಗೆ ನಾಗರೀಕತ್ವ ನೀಡುವ ಕಾನೂನಾಗಿದೆ. ಮೂರು ದೇಶಗಳ ಅಲ್ಪಸಂಖ್ಯಾತರಿಗೆ ನಾಗರೀಕತ್ವ ನೀಡಲೇ ಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನುಡಿದರು.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುತ್ತಿರುವ ಸಿಎಎ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ ಸಮರ್ಥಿಸಿಕೊಂಡರು. ಭಾಷಣ ಆರಂಭಿಸಿದ ಅಮಿತ್ ಶಾ, ಧಾರವಾಡಕ್ಕೆ ಬಂದಿರುವುದು ಸಂತೋಷವಾಗಿದೆ. ಇದೇ ನಾಡಿನ ಕಿತ್ತೂರು ರಾಣಿಚೆನ್ನಮ್ಮ ಹೋರಾಡಿದರು. ಭೀಮ್ ಸೇನ್ ಜೋಶಿ ದ.ರಾಬೇಂದ್ರೆ ಊರು ಇದು ಎಂದು ನುಡಿದರು.
ಮೋದಿ ಅವರುಇ 2ನೇ ಬಾರಿಗೆ ಪಿಎಂ ಆದ ಬಳಿಕ ಹಲವು ಬದಲಾವಣೆಗಳಾಗಿವೆ. 70 ವರ್ಷ ಮಾಡಲಾಗದ ಬದಲಾವಣೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಶೋಷಣೆ ಮಾಡಿದರು. ಶಿಕ್ಷಣ ಅವಕಾಶವನ್ನೇ ಕಿತ್ತುಕೊಂಡರು. ಹೀಗಾಗಿ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ನಾಗರೀಕತ್ವ ಕೊಡಲೇಬೇಕಿದೆ ಎಂದು ಅಮಿತ್ ಶಾ ತಿಳಿಸಿದರು.
Key words: Citizenship – three countries- minority-hubbli-Union Home Minister- Amit Shah