ಮೈಸೂರು,ಫೆಬ್ರವರಿ,16,2021(www.justkannada.in) : ದಿಶಾರವಿ ಅವರು ಪರಿಸರ ಸಂರಕ್ಷಣೆಗಾಗಿ ಹೋರಾಡಲು, ಸಂಘಟನೆ ಮಾಡಲು ಟೂಲ್ ಕಿಟ್ ತಿದ್ದಿ ಹಂಚಿದ್ದೆ ದೇಶದ್ರೋಹವೆ? ಪ್ರಜೆಗಳ ಪ್ರತಿಭಟಿಸುವ ಹಕ್ಕನ್ನೆ ಸರ್ಕಾರ ದಮನಿಸುತ್ತಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.
21 ವರ್ಷದ ವಿದ್ಯಾರ್ಥಿನಿ ದಿಶಾರವಿ ಬಂಧನ ಕುರಿತಂತೆ ಟ್ವೀಟ್ ಮಾಡಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಸರಕಾರದ ಮಾರಕ ನೀತಿಗಳ ವಿರುದ್ಧ ಹೋರಾಡುವುದು ದೇಶಪ್ರೇಮದ ಕೆಲಸವೇ ಹೊರತು ದೇಶದ್ರೋಹವಲ್ಲ ಎಂದಿದ್ದಾರೆ.
ಸೆಸ್ ರೂಪದಲ್ಲಿ ಇಂಧನ ತೆರಿಗೆ ಹೆಚ್ಚಳ
ಇಂಧನ ತೆರಿಗೆ ಹೆಚ್ಚುತ್ತಿರುವುದಷ್ಟೇ ಅಲ್ಲ, ಕೇಂದ್ರ ಈ ಹೆಚ್ಚಿನ ತೆರಿಗೆ ಹಣ ರಾಜ್ಯಗಳಿಗೆ ಸಿಗದಂತೆ ನೋಡಿಕೊಳ್ಳುತ್ತಿದೆ. ಈಬಾರಿ ಬಜೆಟ್ ನಲ್ಲಿ ಸೆಸ್ ರೂಪದಲ್ಲಿ ಇಂಧನ ತೆರಿಗೆ ಹೆಚ್ಚಿಸಿದ್ದಾರೆ. ಸೆಸ್ ಹಣ ವಿಭಜಿಸಬಹುದಾದ ತೆರಿಗೆ ಕೂಡು ನಿಧಿಯಲ್ಲಿ ಬರುವುದಿಲ್ಲ, ಹಾಗಾಗಿ, ಈ ಸೆಸ್ ರೂಪದ ತೆರಿಗೆ ರಾಜ್ಯಗಳಿಗೆ ಹಂಚಿಕೆಯಾಗದೆ ಕೇಂದ್ರದ ಪಾಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
key words : Citizens-protest-Right-Government-Repressive-Legislator-Dr. Yatindra Siddaramaiah-Outrage