ಮೈಸೂರು,ಏಪ್ರಿಲ್,28,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿಯನ್ನ ತಡೆಯಲು 14 ದಿನಗಳ ಕಾಲ ಜನತಾ ಕರ್ಫ್ಯೂ ವಿಧಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಿಟಿ ರೌಂಡ್ ಹಾಕಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಗರದಲ್ಲಿ ಸಂಪೂರ್ಣ ಬಂದ್ ಆಗಿದೆ. ಯಾರು ಕೂಡ ಅನಗತ್ಯವಾಗಿ ಹೊರಗೆ ಬಂದಿಲ್ಲ. ಒಂದು ವೇಳೆ ಅನಗತ್ಯವಾಗಿ ಹೊರಗೆ ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದು ಸ್ವಲ್ಪ ಸಮಯ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಈಗಾಗಲೇ ಹಲವರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಹೊರಗೆ ಹಲವು ಜನರಿಗೆ ಊಟದ ಸಮಸ್ಯೆ ಇದೆ. ಹೀಗಾಗಿ ಅಂತವರ ಬಗ್ಗೆ ಮಾಹಿತಿ ಬಂದರೇ ನಾವೇ ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಸ್ವಯಂ ಸೇವಕರ ಮಾಹಿತಿ ಈಗಾಗಲೇ ನಮ್ಮ ಬಳಿ ಇದೆ. ಆಗೊಮ್ಮೆ ಅಗತ್ಯವಿದ್ದರೇ ಅಂತವರಿಗೆ ಪಾಸ್ ವ್ಯವಸ್ಥೆ ಮಾಡುತ್ತೇವೆ. ಅದು ಕೂಡ ದುರುಪಯೋಗವಾಗಬಾರದು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಾಗೆಯೇ ಜನರು ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದೀರಾ. ಅದರಂತೆ ಈಗಲು ಸಹಕರಿಸಿ ಎಂದು ಜನರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮನವಿ ಮಾಡಿದರು.
Key words: City Round – Mysore –City- Police –Commissioner-chandragupta-lockdown