ಶಿಕ್ಷಣ ಬೇಕಾದರೇ ಯುನಿಫಾರ್ಮ್ ಧರಿಸಿ ಕ್ಲಾಸ್ ಗೆ ಬರಲಿ- ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

ಬೆಂಗಳೂರು,ಫೆಬ್ರವರಿ,4,2022(www.justkannada.in): ಶಿಕ್ಷಣ ಬೇಕಾದರೇ ಯುನಿಫಾರ್ಮ್ ಧರಿಸಿ ಕ್ಲಾಸ್ ಗೆ ಬರಲಿ. ವಸ್ತ್ರಸಂಹಿತೆ ಉಲ್ಲಂಘಿಸಿದರೇ  ಕಾಲೇಜಿಗೆ ಪ್ರವೇಶ ಇಲ್ಲವೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿಕ್ಷಣ  ಬಿ.ಸಿ ನಾಗೇಶ್, ಶಿಕ್ಷಣ ಬೇಕಾದ ಮಕ್ಕಳು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಧರ್ಮ ಪಾಲನೆ ಮಾಡುವುದಕ್ಕೆ ನಾವು ವಿರೋಧಿಸಿಲ್ಲ ಶಿಕ್ಷಣ ಬೇಕಾದರೇ ಅಲ್ಲಿನ ನಿಯಮದಂತೆ ಬರಬೇಕು, ಹೈಕೋರ್ಟ್ ತೀರ್ಪು ಆಧರಿಸಿ ಹೊಸ ನಿಯಮ ಮಾಡುತ್ತೇವೆ.  ಅಲ್ಲಿಯವರೆಗೆ ಈಗಿರುವ ನಿಯಮವೇ ಮುಂದುರೆಯಲಿದೆ ಎಂದರು.  ದೇಶದ ಸಮಗ್ರತೆ ಹಾಳು ಮಾಡಲು ಪಿತೂರಿ ನಡೆಯುತ್ತಿದೆ. ಹಿಜಾಬ್ ವಿವಾದ ಬಳಸಿ ಘರ್ಷಣೆ ಸೃಷ್ಠಿಸುವ ಹುನ್ನಾರವಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಬಿಸಿ ನಾಗೇಶ್, ಮಾಜಿ ಸಿಎಂ ಆಗಿ ಇಂಥ ಮಾತನಾಡಲು ಸಿದ್ಧರಾಮಯ್ಯಗೆ ನಾಚಿಕೆಯಾಗಬೇಕು.  ವೋಟ್ ಗಾಗಿ ಇವರು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ.  ಒಂದು ಸಮುದಾಯದ ಮತಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ.  ಅವರ ಅವಧೀಯಲ್ಲೇ ಈ ಸಮವಸ್ತ್ರ ನಿಯಮ ಮಾಡಿದ್ದಾರೆ.  ಇದರ ಹಿಂದೆ ಯಾವುದೋ ಪಿತೂರಿ ಇದೆ ಅನ್ನಿಸುತ್ತಿದೆ ಎಂದು ತಿಳಿಸಿದರು.

Key words: class – uniform- Minister- BC Nagesh

ENGLISH SUMMARY…

If they want education let them come in uniform: Minister B.C. Nagesh clarifies
Bengaluru, February 4, 2022 (www.justkannada.in): In his response to the ongoing hijab controversy in Udupi District, Primary and Secondary Education Minister B.C. Nagesh has clarified that if they want education let them come in uniform.
“If the children want education they should come in uniform. We are not opposing their wish to follow their religious traditions. If they want to learn they should follow the rules. We have introduced this rule, based on the High Court judgment. It will continue till further orders. A few people are trying to spoil the integrity of the nation. They are trying to disturb the peaceful atmosphere by creating controversy,” he explained.
He also attacked opposition leader Siddaramaiah stating that being a former Chief Minister he should feel ashamed to talk like that. “These people will bow down to any level for votes. They are doing all this to get their votes. The uniform code was introduced when their government was in power. I suspect a conspiracy behind this controversy,” he added.
Keywords: Education Minister/ B.C. Nagesh/ Hijab controversy/ education/ rule