ಕಲ್ಬರ್ಗಿ,ಅಕ್ಟೋಬರ್,4,2021(www.justkannada.in): ರಾಜ್ಯದಲ್ಲಿ 2024 ರೊಳಗೆ ಮನೆಮನೆಗೆ ಶುದ್ದ ಕುಡಿಯೋ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಕಲ್ಬುರ್ಗಿಯ ಐವಾನ್ ಷಾಹಿ ಅತಿಥಿ ಗೃಹದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಕೆ. ಎಸ್ ಈಶ್ವರಪ್ಪ, ರಾಜ್ಯದಲ್ಲಿ 750 ಪಂಚಾಯತಿಗಳು ಆಯ್ಕೆ ಮಾಡಲಾಗಿದ್ದು, ಪ್ರತಿ ಪಂಚಾಯತಿಗೆ 25 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. 2024 ರೊಳಗೆ ಮನೆಮನೆಗೆ ಶುದ್ದ ಕುಡಿಯೋ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ನರೇಂದ್ರ ಮೋದಿ ಚಿನ್ನದ ಗಟ್ಟಿ ಇದ್ದಂಗೆ, ಚಿಲ್ಲರೆ ಮನುಷ್ಯ ಅಂದ್ರೆ ಯಾರಾದ್ರೂ ಒಪ್ಪುತ್ತಾರಾ…
ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಎಂದು ಟೀಕಿಸಿದ್ಧ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಡೀ ವಿಶ್ವವೇ ಮೋದಿಯನ್ನ ಮೆಚ್ಚಿಕೊಂಡಿದೆ. ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ರೆ ಇಡೀ ವಿಶ್ವ ಮೆಚ್ಚುತ್ತಾ. ನರೇಂದ್ರ ಮೋದಿ ಚಿನ್ನದ ಗಟ್ಟಿ ಇದ್ದಂಗೆ. ಚಿಲ್ಲರೆ ಮನುಷ್ಯ ಅಂದ್ರೆ ಯಾರಾದ್ರೂ ಒಪ್ಪುತ್ತಾರಾ. ಬಾಯಿ ತಪ್ಪಿ ಹೇಳಿದ್ರೆ ಖರ್ಗೆ ಕ್ಷಮೆ ಕೇಳಲಿ.ಈ ಮಾತಿನಿಂದ ನನಗಂತೂ ಬಹಳ ಬೇಜಾರಾಗಿದೆ ಎಂದರು.
ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂಬ ಮಾಜಿ ಶಾಸಕ ರಾಜುಕಾಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿಯ ಶಾಸಕರು ಸಿಂಹ ಇದ್ದಂಗೆ. ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಹೋಗೋದೇ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪೀಸ್ ಪೀಸ್ ಆಗಿದೆ. ನಮ್ಮ ಶಾಸಕರೆಲ್ಲ ಚಿನ್ನದ ಗಟ್ಟಿ ತರ ಇದಾರೆ ಎಂದು ಟಾಂಗ್ ನೀಡಿದರು.
ಚುನಾವಣೆ ಬಂದ್ರೆ ಬಿಜೆಪಿಗೆ ಖುಷಿ ಕಾಂಗ್ರೆಸ್ ಗೆ ನಡುಕ. ಚುನಾವಣೆ ಅಂದ್ರೆ ಗೆಲುವು ಬಿಜೆಪಿಗೆ ಫಿಕ್ಸ್. ಸಾಯೋ ಪಾರ್ಟಿ ಅಂದ್ರೆ ಅದು ಕಾಂಗ್ರೆಸ್. ಹೀಗಾಗಿ ಎರಡೂ ಬೈ ಎಲೆಕ್ಷನ್ ನಾವು ಗೆಲ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.
Key words: Clean drinking- water – household -2024-Minister -KS Eshwarappa.
ENGLISH SUMMARY…
All houses to receive clean drinking water by 2024: Minister K.S. Eshwarappa
Kalaburagi, October 4, 2021 (www.justkannada.in): Rural Development Minister K.S. Eshwarappa today informed that all the houses in the state will receive clean drinking water by the year 2024.
Speaking to the press persons at the Ivanshahi Guest House in Kalaburagi today, he explained that the department has identified 750 panchayats in the state, and a sum of Rs. 25 lakh has been earmarked for each panchayat to supply clean drinking water to all the houses by 2024.
In his response to Rajya Sabha opposition leader Mallikarjun Kharge’s criticism against Prime Minister Narendra Modi calling him a cheap person, Eshwarappa said, “The whole world has accepted him as a leader. Will the world heed to Kharge’s words? Narendra Modi is like a gold mine will anyone agree if he is called a cheap person? In case if Kharge has spoken those words by mistake, let him apologize. I am deeply hurt by his words.”
In his response to the scribes’ question about the former MLA Raju Kage’s allegations of 40 MLAs will soon join the Congress party, Eshwarappa said BJP’s MLAs are like lions. “No one will go to Congress. The Congress party is already shattered into pieces. All our MLAs are like gold mines,” he said.
Keywords: BJP/ Minister K.S. Eshwarappa/ Congress/ Mallikarjun Kharge/ Prime Minister Narendra Modi/ cheap man