ಸ್ವಚ್ಛ ಸರ್ವೇಕ್ಷಣಾ ಅಭಿಯಾನ: ದೇಶದಲ್ಲೇ ಶಿವಮೊಗ್ಗ ಪಾಲಿಕೆಗೆ ಮೊದಲ ಸ್ಥಾನ. ಮೈಸೂರಿಗೆ 3ನೇ ಸ್ಥಾನ.

ಶಿವಮೊಗ್ಗ,ಸೆಪ್ಟಂಬರ್,28,2022(www.justkannada.in):  ಕೇಂದ್ರ ಸರ್ಕಾರ ದೇಶಾದ್ಯಂತ 2022 ರಲ್ಲಿ ನಡೆಸಿದ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೊದಲ ಸ್ಥಾನ ಪಡೆದರೇ ಮೈಸೂರಿಗೆ 3ನೇ ಸ್ಥಾನ ಲಭಿಸಿದೆ.

 ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ,   ಸ್ವಚ್ಛ ಸರ್ವೇಕ್ಷಣ-2022 ರ ಅಂಗವಾಗಿ ಕೇಂದ್ರ ಸರಕಾರದ ತಜ್ಞರ ತಂಡ ಕೈಗೊಂಡ ಕ್ಷೇತ್ರ ಭೇಟಿ ಮತ್ತು ಸಾರ್ವಜನಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ಸ್ಪರ್ಧೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉತ್ತಮ ಶ್ರೇಯಾಂಕ ಪಡೆದಿದೆ.  ಅಕ್ಟೋಬರ್ 1 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಪಾಲಿಕೆಯ ವಿವಿಧ ವಿಭಾಗಗಳಲ್ಲಿ ತೋರಿರುವ ಕಾರ್ಯಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಘನತ್ಯಾಜ್ಯ ವಸ್ತು ನಿರ್ವಹಣೆ -2016 ರ ನಿಯಮದಂತೆ ಕೆಲವು ವಿನೂತನ, ನವೀನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ವಿಲೇ ಮಾಡಿರುವುದರಿಂದ ಈ ಪ್ರಶಸ್ತಿ ಲಭಿಸಿದೆ ಎಂದರು.

Key words: Clean -Survey –Campaign-Shimoga Corporation – first – country-3rd position -Mysore.