ಮೈಸೂರಿನ ಐಶ್( AIISH) ಸ್ವಚ್ಛತಾ ಕಮಿಟಿ ವತಿಯಿಂದ ಸ್ವಚ್ಚತಾ ಅಭಿಯಾನ

ಮೈಸೂರು,ಸೆಪ್ಟಂಬರ್,19,2024 (www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ಎರಡು ಹಂತದಲ್ಲಿ ಸ್ವಚ್ಚತಾ ಅಭಿಯಾನವನ್ನ ಆಯೋಜಿಸಿದೆ.

ಮೊದಲ ಹಂತದಲ್ಲಿ MoHUA & DDWS ಮೂಲಕ ಜಂಟಿಯಾಗಿ ಸೆಪ್ಟಂಬರ್ 17 ರಿಂದ  ಅಕ್ಟೋಬರ್ 2ರವರೆಗೆ ಸ್ವಚ್ಛತಾ ಹಿ ಸೇವಾ ಅಭಿಯಾನ ನಡೆಯುತ್ತಿದ್ದು ಈ ವೇಳೆ ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ಸ್ಥಳಗಳ ಶುಚಿಗೊಳಿಸುವಿಕೆಗೆ ಗಮನ ಕೊಡಲಾಗಿದೆ. ಈ ಅವಧಿಯಲ್ಲಿ ಐಶ್ (AIISH) ಸಂಸ್ಥೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿಶೇಷ ಚೇತನ ಮಕ್ಕಳಿಂದ  ಪ್ಲಾಸ್ಟಿಕ್ ಬಾಟಲ್ ಗಳನ್ನ ಉಪಯೋಗಿಸಿ ತಮ್ಮ ಕೌಶಲ್ಯ ಪ್ರದರ್ಶಿಸುವುದು , ಗಿಡ  ನೆಡುವ ಕಾರ್ಯಕ್ರಮ, ಏಕ್ ಪೇಡ್ ಮಾಕೆ ನಾಮ್ ಕಾರ್ಯಕ್ರಮ ಜರುಗಲಿವೆ.

ಎರಡನೇ ಹಂತದಲ್ಲಿ ಅಕ್ಟೋಬರ್ 2ರಿಂದ  31ರವರೆಗೆ ಕಚೇರಿಯೊಳಗೆ ಸ್ವಚ್ಛತಾ ಅಭಿಯಾನ ಅಂದರೆ ಕಛೇರಿಯಲ್ಲಿ ಶುಚಿಗೊಳಿಸುವಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಲ್ಲದೆ ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ತಪಾಸಣೆ ಶಿಬಿರ, ಮೆಡಿಷನ್ ಕಿಟ್ ಹಂಚುವುದು ಇನ್ನಿತರ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.

ಸಚಿವಾಲಯದ ಮಾರ್ಗಸೂಚಿಗಳ ಅಡಿಯಲ್ಲಿ ಸ್ವಚ್ಛತಾ ಹಿ ಸೇವಾ 4.0 ಅಭಿಯಾನದ ಭಾಗವಾಗಿ, 17.09.2024 ರಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು ಮತ್ತು ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಸ್ವಚ್ಛತಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Key words: Cleanliness campaign, AIISH, Mysore.