ಮೈಸೂರು,ಸೆಪ್ಟಂಬರ್,28,2024 (www.justkannada.in): ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದ್ದು ಸ್ವತಃ ನ್ಯಾಯಾಧೀಶರು ಮತ್ತು ವಕೀಲರ ತಂಡ , ಸಿಬ್ಬಂದಿಗಳು ಪೊರಕೆ ಹಿಡಿದು ಸ್ವಚ್ಚತಾ ಕಾರ್ಯ ಕೈಗೊಂಡರು.
‘ಸ್ವಚ್ಚತಾ ಹೀ ಸೇವಾ’ ಅಂಗವಾಗಿ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾ, ಮತ್ತು ತಾಲ್ಲೂಕು ಕೋರ್ಟ್ ಗಳಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಅಂತೆಯೇ ಇಂದು ನಗರದ ಹಳೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿದ್ದು 7 ನೇ ಸತ್ರ ಜಿಲ್ಲಾ ನ್ಯಾಯಾಲಯರಾದ ಎಂ. ರಮೇಶ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯದಲ್ಲಿ ನ್ಯಾಯಾಧೀಶರು, ಸಿಬ್ಬಂದಿ ವರ್ಗ ಮತ್ತು ವಕೀಲರ ತಂಡ ಭಾಗಿಯಾಗಿದ್ದರು.
ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಈ ರೀತಿಯ ಸ್ವಚ್ಚತಾ ಅಭಿಯಾನದಲ್ಲಿ ಭಾಗಿಯಾಗಿ ನಮ್ಮ ನ್ಯಾಯಾಲಯದ ಆವರಣವನ್ನ ನಾವೇ ಸ್ವಚ್ಛ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ಇದು ಒಂದು ಒಳ್ಳೆಯ ಪರಿಕಲ್ಪನೆ ಎಂದು ನ್ಯಾಯಾಧೀಶರಾದ ಎಂ.ರಮೇಶ್ ತಿಳಿಸಿದರು.
ಸ್ವಚ್ಚತಾ ಅಭಿಯಾನದಲ್ಲಿ ಮತ್ತಿತರ ನ್ಯಾಯಾಧೀಶರಾದ ಸೋಮಶೇಖರ್, ಮಲ್ಲಣ್ಣಗೌಡ್ರು, ಆನಂದ್ ಹೋಗಾಡೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
Key words: Cleanliness campaign, Mysore, district, court