ಮೈಸೂರು,ಸೆಪ್ಟಂಬರ್,13,2021(www.justkannada.in): ವಕ್ಫ್ ಬೋರ್ಡ್ ಮಾದರಿಯಲ್ಲಿ, ಹಿಂದೂ ದೇವಾಲಯ ರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ಮಾಡಬೇಕು. ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿ ಸಮಸ್ಯೆ ಇರಲ್ಲ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸುಪ್ರೀಂಕೋರ್ಟ್ ದೇವಾಲಯವನ್ನು ಒಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇಗುಲ ರಸ್ತೆಗೆ ಅಡ್ಡಿಯಾಗುತ್ತಿರಲಿಲ್ಲ. ಅದು ಐತಿಹಾಸಿಕ ದೇಗುಲ, ಅದನ್ನು ತೆರವು ಮಾಡಿದ್ದಾರೆ. ಮೂಲ ವಿಗ್ರಹ ಸ್ಥಳಾಂತರಿಸದೆ ನೆಲಸಮ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಸಿಎಂ ಬೊಮ್ಮಾಯಿಗೆ ತಿಳಿಸಿದ್ದೇನೆ. ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಸಿಎಂಗೆ ಕೇಳಿದ್ದೇನೆ. ಸಿಂ ಬಸವರಾಜ ಬೊಮ್ಮಾಯಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.ಮೈಸೂರಿನಲ್ಲಿ ದೇಗುಲಗಳ ತೆರವು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸುಪ್ರಿಂಕೋರ್ಟ್ ಆದೇಶ ಎಂದು ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ಸಂಸದ ಪ್ರಧಾಪ್ ಸಿಂಹ ಅಧಿಕಾರಿಗಳ ವಿರುದ್ಧ ಮತ್ತೆ ಕಿಡಿಕಾರಿದರು.
ENGLISH SUMMARY…
CM assures to stop demolishing temples in Mysuru: MP Pratap Simha
Mysuru, September 13, 2021 (www.justkannada.in): Mysuru and Kodagu MP Pratap Simha has urged the State Government to form a separate board like the Wakf Board, in order to protect Hindu temples.
Addressing a press meet in Mysuru today, he informed that the Hon’ble Supreme Court has not ordered to demolish the temple. The Ucchagani Mahadevamma Temple was not posing any problem to the road. It is a historic temple, which they have demolished. “They have demolished the temple without shifting the idol of the deity. I have explained all this to Chief Minister Basavaraj Bommai. I have also urged him to initiate action against the Nanjangud Magistrate and also requested to give instructions to the district administration,” he said.
On the occasion, he also informed that the authorities are misguiding the people by saying that it is Supreme Court orders. “They are hurting the religious sentiments of our people,” he alleged.
Keywords: MP Pratap Simha/ temple/ demolition/ Chief Minister/ Basavaraj Bommai/ assured
Key words: Clearance -temples –controversy-mysore-MP Pratap simha