ಬೆಂಗಳೂರು. ಆಗಸ್ಟ್ 28, 2021 (www.justkannada.in): ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಕ್ರಿಸ್ಟಿನಾ ಮೆಕಾಲೆ ‘ಕ್ಲೀವ್‌ಲ್ಯಾಂಡ್ ಟೆನಿಸ್’ ಕೂಟದ ವನಿತಾ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಫೈನಲ್‌ನಲ್ಲಿ ಶ್ರೇಯಾಂಕರಹಿತ ಸಾನಿಯಾ-ಮೆಕಾಲೆ ಅಗ್ರ ಶ್ರೇಯಾಂಕದ ಜಪಾನಿ ಜೋಡಿ ಶುಕೊ ಒಯಾಮಾ-ಎನಾ ಶಿಬಹಾರ ವಿರುದ್ಧ ಸೆಣಸಲಿದ್ದಾರೆ.
ಸೆಮಿಫೈನಲ್‌ನಲ್ಲಿ ಇಂಡೋ-ಅಮೆರಿಕನ್ ಜೋಡಿ ಉಲ್ರಿಕ್ ಐಕೆರಿ (ನಾರ್ವೆ)-ಕ್ಯಾಥರಿನ್ ಹ್ಯಾರಿಸನ್ (ಅಮೆರಿಕ) ಜೋಡಿಯನ್ನು 7-6 (5), 6-2 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದೆ.