ಬೆಂಗಳೂರು,ಜನವರಿ,18,2021(www.justkannada.in) : ನೆಲಜಲ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿ ನಿರ್ಧಾರ ಹೊಂದಿದೆ. ನಾಡಿನ ನೆಲ ಜಲ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ ವರದಿಯೇ ಅಂತಿಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿರಬಹುದು. ಆದರೆ, ನಾಡಿನ ನೆಲ ಜಲ ವಿಚಾರದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಬಲ್ ಎಂಜಿನ್ ಸಾಧನೆ ಏನು?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡಬಲ್ ಎಂಜಿನ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ ಮಹಾದಾಯಿ ವಿಚಾರದಲ್ಲಿ ಈ ಡಬಲ್ ಇಂಜಿನ್ ಏನು ಮಾಡಿದೆ?, ಉತ್ತರ ಕರ್ನಾಟಕಕ್ಕೆ ಈ ಸರ್ಕಾರದಲ್ಲಿ ಅನ್ಯಾಯವಾಗಿದೆ. ಡಬಲ್ ಎಂಜಿನ್ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.
ಬಿ.ಎಸ್.ವೈ ಸಿಡಿ ವಿಚಾರ ಅಧಿವೇಶನದಲ್ಲಿ ಚರ್ಚೆಬಿಜೆಪಿ ಶಾಸಕರೇ ಪ್ರಸ್ತಾಪಿಸಿರುವ ಸಿಎಂ ಬಿ.ಎಸ್.ವೈ ಸಿಡಿ ವಿಚಾರ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಸಿಡಿಯ ಬಗ್ಗೆ ಅನೇಕ ವಿಚಾರ ನನಗೂ ಗೊತ್ತು. ಹೀಗಾಗಿ, ಅದನ್ನೆಲ್ಲಾ ಅಧಿವೇಶನ ಸಂದರ್ಭದಲ್ಲಿ ನೋಡೋಣ ಎಂದು ತಿಳಿಸಿದರು.
key words : clime-Ground-Water-terms-No compromise-KPCC President-D.K.Shivakumar