ದೆಹಲಿ ವಿಧಾನಸಭೆ ಚುನಾವಣೆ:  ಸಿಎಂ ಅತಿಶಿ  ಜಯಭೇರಿ

ದೆಹಲಿ,ಫೆಬ್ರವರಿ,8,2025 (www.justkannada.in):  ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ 46, ಎಎಪಿ  24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಕನಸು ಹೊತ್ತಿದ್ದ ಎಎಪಿ ಆಸೆ ಭಗ್ನಗೊಂಡಿದ್ದು, ಎಎಪಿಯ ಪ್ರಮುಖ ನಾಯಕರೇ ಸೋಲಿನ ರುಚಿ  ಅನುಭವಿಸಿದ್ದಾರೆ. ಎಎಪಿ ಮುಖ್ಯಸ್ಥ ಹಾಗೂ ಮಾಜಿ ಡಿಸಿಎಂ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೋಲುನುಭವಿಸಿದ್ದಾರೆ.

ಆದರೆ ಇತ್ತ ದೆಹಲಿ ಸಿಎಂ ಅತಿಶಿ ಅವರು ಗೆಲುವಿನ ನಗೆ ಬೀರಿದ್ದಾರೆ. ಹೌದು, ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಲಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ದ ಅತಿಶಿ ಅವರು ಗೆಲುವು ಸಾಧಿಸಿದ್ದಾರೆ. ಇನ್ನು ಶಕುರ್ ಬಸ್ತಿಯಲ್ಲಿ ಅಪ್ ಅಭ್ಯರ್ಥಿ ಸತ್ಯೇಂದ್ರ ಜೈನ್ ಅವರಿಗೆ ಸೋಲಾಗಿದ್ದು ಬಿಜೆಪಿ ಅಭ್ಯರ್ಥಿ ಕರ್ನೈಲ್ ಸಿಂಗ್ ಭರ್ಜರಿ ಜಯ ಸಾಧಿಸಿದ್ದಾರೆ.

Key words: Delhi, Assembly Elections, CM, Atishi, wins