ಮೈಸೂರು,ನ, 26,2019(www.justkannada.in): ಶತಶತಮಾನಗಳಿಂದ ಶೋಷಣೆ ದಬ್ಬಾಳಿಕೆ ಗೊಳಗಾಗಿರುವ ಕಾಯಕ ಸಮುದಾಯಗಳಿಗೆ ಡಿ.ದೇವರಾಜ ಅರಸು ನಂತರ ಅನೇಕ ಯೋಜನೆಗಳನ್ನು ನೀಡುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಭರವಸೆಯಬೆಳಕಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಆರ್. ರಘು (ಕೌಟಿಲ್ಯ) ಅವರು ಹೇಳಿದರು.
ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಬಿರುಸಿನ ಪ್ರಚಾರ ಕೈಗೊಂಡ ಅವರು ಕಾಯಕ ಸಮಾಜಗಳ ಸಂಘಟನೆಯ ಹೆಸರಿನಲ್ಲಿ ಕೆಲವರು ಕಾಂಗ್ರೆಸ್ ನ ಏಜೆಂಟ್ ಗಳಂತೆ ಈ ಚುನಾವಣೆಯಲ್ಲಿ ವರ್ತಿಸುತ್ತಿರುವುದು
ಮುಗ್ಧ ಮತ್ತು ಶೋಷಿತ ಸಮುದಾಯಗಳನ್ನು ದಾರಿತಪ್ಪಿಸಲು ನಡೆಸುತ್ತಿರುವಪ್ರಯತ್ನವಾಗಿದೆ ಎಂದು ಆರೋಪಿಸಿದ ರಘು ಅವರು ,
ಶೋಷಣೆ ದೌರ್ಜನ್ಯ ಡಾಂಭಿಕತೆ ಅಸಮಾನತೆಗಳು ಕಾಂಗ್ರೆಸ್ ನ ಅಸ್ತ್ರಗಳಾಗಿವೆ ಇವುಗಳನ್ನು ಕಾಯಕ ಸಮಾಜಗಳಲ್ಲಿ ಎಂದಿಗೂ ಜೀವಂತವಾಗಿರುವಂತೆ ನೋಡಿಕೊಳ್ಳುವುದೇ ಅದರ ಮೂಲ ಉದ್ದೇಶ ಅವುಗಳು ಎಲ್ಲಿಯವರೆಗೂ ಜೀವಂತವಾಗಿರುತ್ತವೋ ಅಲ್ಲಿಯವರೆಗೂ ಕಾಯಕ ಸಮುದಾಯಗಳು ಮತ ಬ್ಯಾಂಕ್ ಗಳಾಗಿ ನಮ್ಮೊಂದಿಗೆ ಉಳಿಯುತ್ತದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಬದುಕುತ್ತಿದೆ ,
70 ವರ್ಷಗಳಿಂದ ಕಾಂಗ್ರೆಸ್ ಕೇವಲ ಶೋಷಿತ ಸಮಾಜಗಳನ್ನು ಮತ ಬ್ಯಾಂಕುಗಳಾಗಿ ಬಳಸಿಕೊಂಡು ಕಾಯಕ ಸಮುದಾಯಗಳಿಗೆ ದ್ರೋಹ ಎಸುಗುತ್ತಾ ಬಂದಿದೆ
ದೇವರಾಜ ಅರಸು ರವರ ನಂತರದಲ್ಲಿ ಅವರದ್ದೇ ಚಿಂತನೆಗಳು ಮತ್ತು ವ್ಯಕ್ತಿತ್ವವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಬಸವಣ್ಣನವರ ಕಾರ್ಯತತ್ಪರತೆಯನ್ನು ಸಾಮಾಜಿಕ ಸಮಾನತೆಯ ದ್ಯೇಯವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಚಲಿತ ಸಮಾಜದ ವ್ಯವಸ್ಥೆಯನ್ನು ಶೋಧಿಸಿ ಹಿಂದುಳಿದ ಸಮುದಾಯಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಅವರಿಗೆ ದೇವರಾಜ ಅರಸು ಅವರ ಜನ್ಮಭೂಮಿಯಲ್ಲಿ ಎ.ಎಚ್.ವಿಶ್ವನಾಥ್ ರವರನ್ನು ಗೆಲ್ಲಿಸುವ ಮೂಲಕ ಹುಣಸೂರಿನ ಸಮಗ್ರ ಅಭಿವೃದ್ಧಿಗಾಗಿ ಯಡಿಯೂರಪ್ಪನವರ ಕೈಗೆ ಶಕ್ತಿ ತುಂಬಬೇಕೆಂದು ಹುಣಸೂರು ತಾಲ್ಲೂಕಿನ ಹಳೇಬೀಡು, ಆಯರಹಳ್ಳಿ, ಬಿಳಿಕೆರೆ, ಹೂಸರಾಮನಹಳ್ಳಿ, ಗಾಗೇನಹಳ್ಳಿ, ಧರ್ಮಪುರು,ರತ್ನಪುರಿ,ಯಮಗುಂಬ, ಮೊದಲಾದ ಗ್ರಾಮಗಳಲ್ಲಿ ರಘುರವರು ಕಾಯಕ ಸಮಾಜಗಳನ್ನು ಉದ್ದೇಶಿಸಿ ಮತ ಪ್ರಚಾರ ಮಾಡುತ್ತ ವಿನಂತಿಸಿದರು .
ಮಡಿವಾಳ ಸಮಾಜದ ಚಿಲ್ಕುಂದ ರವಿ, ಕುಂಬಾರ ಸಮಾಜದ ನಾಗರಾಜ್, ಗಾಣಿಗ ಸಮಾಜದ ಇಂಟಕ್ ರಾಜು, ಹೊಸರಾಮನ ಹಳ್ಳಿ ರಘು, ಹಳೇಬೀಡು ಸಿದ್ದಪ್ಪ, ಪ್ರಕಾಶ್ ಮೊದಲಾದ ಮುಖಂಡರುಗಳು ಈ ಸಂದರ್ಭದಲ್ಲಿ ಜತೆಗಿದ್ದರು.
CM B.S. Y -hopeful -BJP co-spokesperson- R. Raghu