ಬೆಂಗಳೂರು, ಮೇ 16, 2020 : (www.justkannada.in news ) ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿದ ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಚರ್ಚೆ ನಡೆಸಿದರು
ಈ ವೇಳೆ ಶಿಕ್ಷಕರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಸದಸ್ಯರು ಮಾತನಾಡಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಬಾಕಿ ಉಳಿಸಿಕೊಂಡಿರೋ ಅರ್ ಟಿ ಐ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು .ಅನುದಾನ ರಹಿತ ಶಿಕ್ಷಕರಿಗೆ ಕೋವಿಡ್ ನಿಂದ ಸಂಬಳ ಆಗದೆ ಇರುವುದರಿಂದ ಅವರಿಗೆ ಸಹ ವಿಶೇಷ ಪ್ಯಾಕೇಜ್ ನೀಡಬೇಕು .ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು. ಬಡ ಶಿಕ್ಷಕರಿಗೆ ಆಹಾರ ಕಿಟ್ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಭರವಸೆ :
ಈಗಾಗಲೇ ಆರ್ ಟಿ ಐ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಿಗು ಸಂಬಳ ಬಿಡುಗಡೆ ಮಾಡಲು ಸೂಚನೆ ನೀಡಲಾಗುವುದು. ಬಡ ಶಿಕ್ಷಕರಿಗೆ ಕಿಟ್ ಕೊಡಲು ಕೂಡಲೇ ನಿರ್ದೇಶನ ನೀಡಲಾಗುವುದು. ಉಳಿದ ಬೇಡಿಕೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬಗೆಹರಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
key words : cm-b.s.yadiyurappa-assures-private-school-teacher-special-pakage