ನಮ್ಮ ಸಚಿವರ ಟೀಂ ಪುಟ್ಬಾಲ್ ಟೀಂ ಇದ್ದಂತೆ: ರಾಜ್ಯದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ಧ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜನವರಿ,28,2022(www.justkannada.in): ನಮ್ಮಲ್ಲಿ ಒಳ್ಳೆಯ ಸಚಿವರ ಟೀಂ ಇದೆ.  ನಮ್ಮದು ಒಳ್ಳೆಯ ಪುಟ್ಬಾಲ್ ಟೀಂ ಇದ್ದಂತೆ . ನಮ್ಮ ಟೀಮ್ ಗೆ ಆಕ್ರಮಣಕಾರಿ ಆಟ ಆಡೋದು ಗೊತ್ತು. ರಾಜ್ಯದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದಿಗೆ 6 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜನಕಲ್ಯಾಣ ಕಾರ್ಯಕ್ರಮ  ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು.

ಎಲ್ಲ ಇಲಾಖೆಗಳಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. 2ನೇ ಅಲೆಯಲ್ಲಿ ಆರೋಗ್ಯ ಕ್ಷೇತ್ರ ಬಲಗೊಳಿಸಿದ್ದೇವೆ ಕೊರೋನಾ 3ನೇ ಅಲೆಯನ್ನ ಸಮರ್ಥವಾಗಿ ನಿಯಂತ್ರಿಸಿದ್ದೇವೆ. ವ್ಯಾಕ್ಸಿನ್ ನೀಡಿಕೆಯಲ್ಲಿ ಶೇ.100ಕ್ಕೆ 100 ರಷ್ಟು ಸಾಧನೆ ಮಾಡಿದ್ದೇವೆ ಎಂದರು.

ನಾವು ಟಾರ್ಗೆಟ್ ಇಟ್ಟಿಕೊಂಡು ಯೋಜನೆಗಳನ್ನ ಜಾರಿ ಮಾಡುತ್ತಿದ್ದೇವೆ.  ಆಧುನಿಕತೆಯ ಸ್ಪರ್ಶ, ಸುಲುಭ ಉದ್ಯೋಗದ ಗುರಿ ನಮ್ಮ ಆದ್ಯತೆ.  ರೈತರ ಆದಾಯ ದುಪ್ಪಟ್ಟುಗೊಳಿಸಲು ಯೋಜನೆ ರೂಪಿಸಿದ್ದೇವೆ  ಹೈನುಗಾರಿಕೆ ತೋಟಗಾರಿಕೆ ರೆಷ್ಮೆಯಿಂದಲೂ ಗಳಿಕೆ. ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ.. ತಲವಾರು ಆದಾಯದಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ.  ಕೇವಲ 30ರಷ್ಟು ಜನರಿಂದ ಮಾತ್ರ ತಲಾದಾಯ ಸಂಗ್ರಹ ಮಾಡಲಾಗುತ್ತಿದೆ  ಕೆಳವರ್ಗದ ಜನರಿಗೆ ಆರ್ಥಿಕ ಬಲ ತುಂಬುವ ಯೋಜನೆ ಜಾರಿ ಮಾಡುತಿದ್ದೇವೆ ಎಂದರು.

ರಾಜ್ಯದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ಧ.  ನಿಮ್ಮ ವಿಶ್ವಾಶಕ್ಕೆ ದಕ್ಕೆಯಾಗದಂತೆ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಳ್ಳೆಯ ಸಚಿವರ ಟೀಂ ಇದೆ.  ಅವಕಾಶವನ್ನ ಜನಪರ ಕೆಲಸಕ್ಕೆ ಬಳಸಿಕೊಳ್ಳಬೇಕು ನಮ್ಮದು ಒಳ್ಳೆಯ ಪುಟ್ಬಾಲ್ ಟೀಂ ಇದ್ದಂತೆ ಟೀಮ್ ಗೆ ಆಕ್ರಮಣಕಾರಿ ಆಟವಾಡೋದು ಗೊತ್ತು

ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ. 365 ದಿನಗಳ ರಾಜ್ಯದಲ್ಲಿ ಕೃಷಿ ಉತ್ಪಾದನೆಯಾಗುತ್ತದೆ. ಇಂತಹ ಭಾಗ್ಯ ದೇಶದ ಯಾವ ರಾಜ್ಯದಲ್ಲಿಯೂ ಇಲ್ಲ. ನಮ್ಮಲ್ಲಿ ಸಂಪದ್ಭರಿತ ಖನಿಜ ಸಂಪನ್ಮೂಲವೂ ಇದೆ.ಕರ್ನಾಟಕದಲ್ಲಿ ಸಂಪದ್ಬಪರಿತ ಅರಣ್ಯ ಸಂಪತ್ತು ಇದೆ.

ಸರ್ಕಾರಕ್ಕೆ ಎಷ್ಟೇ ಕಷ್ಟಬಂದರೂ, ಎಷ್ಟೇ ಹಣದ ಸಂಕಷ್ಟ ಬಂದರೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲ್ಲ. ಅದರಂತೆ ನಾವು ನಡೆದುಕೊಂಡಿದ್ದೇವೆ. 14 ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ವಿಶೇಷ ಚೇತನರಿಗೆ ಮಾಸಿಕ 800 ರೂ. ಹೆಚ್ಚಿಸಿದ್ದೇವೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿಯನ್ನು 1,200 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿಧವಾ ವೇತನ ವೇತನ 600 ರೂ. ನಿಂದ 800 ರೂ.ಗೆ ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: cm Basavaraj bommai- government – development

ENGLISH SUMMARY…

Our cabinet is like a football team: We are committed for the overall development of the State – CM Bommai
Bengaluru, January 28, 2022 (www.justkannada.in): “We have a good cabinet team. Our cabinet is like a football team. Our team knows how to play aggressively. We are committed to the overall development of the state,” opined Chief Minister Basavaraj Bommai.
The ‘Janaklayana’ program was held at the banquet hall in Vidhana Soudha, to mark Basavaraj Bommai’s completion of 6 months as Chief Minister.
In his address, he informed that a lot of developmental activities have taken place in all the departments. “We have strengthened the health sector during the 2nd wave and we have managed the 3rd wave efficiently. We have achieved 100% success in administering COVID vaccination. We are implementing the programs based on targets. Our priority is to bring modernity and create jobs. We have made plans to double the farmers’ income through dairy farming and horticulture and sericulture farming. Not money, work is important for us. Karnataka is in 4th place in the country when it comes to per capita income. Individual tax is being collected only from 30% people, we are implementing a program that provides financial strength to the lower classes of the society,” he added.
Keywords: Chief Minister Basavaraj Bommai/ cabinet/ football team