ಉಡುಪಿ,ಆಗಸ್ಟ್,13,2021(www.justkannada.in) ಇಂದು ವಿಶ್ವ ಅಂಗಾಂಗ ದಾನ ದಿನ ಹಿನ್ನೆಲೆ ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರೂ ಸಹಿ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಉಡುಪಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು. ಇದರಿಂದಾಗಿ ಸಾವಿರಾರು ಜನರ ಜೀವ ಉಳಿಸಬಹುದು. ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅದು ಯಶಸ್ವಿಯಾಗುತ್ತಿದೆ. ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ 3ನೇ ಭೀತಿ ಅಲೆ ಹಿನ್ನೆಲೆ ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಹೋದ ನಂತರ ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ. ತಜ್ಞರು ನೀಡುವ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ENGLISH SUMMARY…
“I promise to donate my organs, you also do so: CM Bommai
Udupi, August 13, 2021 (www.justkannada.in): Chief Minister Basavaraj Bommai announced that he has signed a document to donate his organs and called the citizens also to do so.
Speaking to the media persons in Udupi today on the occasion of ‘World Organs Day,’ he said that more people should come forward to donate organs. “It can save thousands of people. Organ transplant technology has developed a lot these days and the majority of the cases are successful. If some other’s life could be saved by us why shouldn’t we step forward? Let us all pledge to donate organs. I have signed the document today and request all others to do so,” he said.
In his reply about the COVID-19 Pandemic 3rd wave, the Chief Minister informed that he would conduct an emergency meeting as soon as he returns to Bengaluru. “We will take measures as per the expert’s opinion,” he added.
Keywords: Chief Minister Basavaraj Bommai/ World Organ Day/ donate
Key words: cm basavaraj bommai-udupi- organ –donation