ಸಚ್ಚಿದಾನಂದ ಆಶ್ರಮದಿಂದ ಚೆಲುವಾಂಬ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ: ಸಿಎಂ ಬೊಮ್ಮಾಯಿಗೆ ಹಸ್ತಾಂತರ.

ಮೈಸೂರು,ಜೂನ್,8,2022(www.justkannada.in): ಮೈಸೂರಿನ ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ವರ್ಧಂತ್ಯೋತ್ಸವ ಹಿನ್ನೆಲೆ. ಸಚ್ಚಿದಾನಂದ ಆಶ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಸಚ್ಚಿದಾನಂದ ಆಶ್ರಮ ದತ್ತಪೀಠದಲ್ಲಿ‌ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಆಶ್ರಮದ ವಿಶ್ವಪ್ರಾರ್ಥನಾ ಮಂದಿರದಲ್ಲಿ ಯಜ್ಞ, ಹೋಮ ವೀಕ್ಷಣೆ ಮಾಡಿ ನಂತರ ಶ್ರೀಗಳ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಇನ್ನು ವರ್ಧಂತ್ಯೋತ್ಸವದ ಅಂಗವಾಗ ಸಚ್ಚಿದಾನಂದ ಆಶ್ರಮದಿಂದ ಚೆಲುವಾಂಬ ಆಸ್ಪತ್ರೆಗೆ28 ಲಕ್ಷ ವೆಚ್ಚದ ಆಂಬುಲೆನ್ಸ್ ಕೊಡುಗೆ ನೀಡಲಾಯಿತು. ಶ್ರೀಗಳು ಆಂಬುಲೆನ್ಸ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚ್ಚಿದಾನಂದ ಶ್ರೀಗಳು ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಿದ್ದಾರೆ. ಆರೋಗ್ಯ ಶಿಕ್ಷಣದಲ್ಲಿ ಅಗಾಧ ಕೊಡುಗೆ ನೀಡಿದ್ದಾರೆ.ಲೋಕ ಕಲ್ಯಾಣಕ್ಕಾಗಿ ಒಂದುಕೋಟಿ ದತ್ತಾತ್ರೇಯ ಜಪ ನಡೆಯುತ್ತಿದೆ. ಇದು ಲೋಕಕಲ್ಯಾಣಕ್ಕಾಗಿ ಮಾತ್ರ ಅಲ್ಲ, ಕರ್ನಾಟಕದ ಅಭಿವೃದ್ಧಿಗೆ ಪೂರಕ. ಸಂಕಲ್ಪದ ಪರಾಕಾಷ್ಠೆಯ ಸ್ವರೂಪವಾಗಿ ಜಪತಪ ಮಾಡ್ತಿದ್ದಾರೆ. ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ. ನಮ್ಮ ಪ್ರಾರ್ಥನೆ ಲೋಕಕಲ್ಯಾಣಕ್ಕಾಗಿದ್ದರೆ ಅದಕ್ಕೆ ಭಗವಂತನ ಅನುಗ್ರಹ ಇರುತ್ತೆ. ಸ್ವಾರ್ಥವಿಲ್ಲದ ಬೇಡಿಕೆಗಳನ್ನು ಭಗವಂತ ಈಡೇರಿಸುತ್ತಾನೆ. ನಾನು ಹುಟ್ಟಿ ಬೆಳಿದಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ. ಹೀಗಾಗಿ ನನ್ನ ಅರಿವು ಬಂದಾಗಿಂದಲೋ  ನಮಷ್ಕರಿಸಿರೋದು ದತ್ತಾತ್ರೇಯನಿಗೆ. ಅತ್ಯಂತ ಚಿಕ್ಕವಯಸ್ಸಿನಲ್ಲೇ ನನಗೆ ದತ್ತಾತ್ರೇಯನ ಆಶೀರ್ವಾದ ಸಿಕ್ಕಿತ್ತು. ಇಂದು ದತ್ತಾತ್ರೇಯ ಸನ್ನಿಧಿಗೆ ಬಂದಾಗ ಅದೆಲ್ಲವೂ ನೆನಪಾಯಿತು. ನಿಮ್ಮ ಆಶೀರ್ವಾದದಿಂದ ರಾಜ್ಯ ಸಮೃದ್ಧಿಯಾಗಲಿ. ಎಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಉಪಸ್ಥಿತರಿದ್ದರು.

Key words: CM- Basavaraj bommai-visit-mysore-Sachidananda Ashram

ENGLISH SUMMARY…

Sachchidananda Ashram donates ambulance to Cheluvamba Hospital: Hands over keys to CM Bommai
Mysuru, June 8, 2022 (www.justkannada.in): Chief Minister Basavaraj Bommai today visited the Sachchidananda Ashram in Mysuru on the occasion of the 80th birthday celebrations of Ganapathi Sachchidananda Swamiji and sought his blessings.
The CM who offered special pooja at the ashram, and discussed with the Swamiji after visiting the Vishwaprarthana Mandira, Yajna, and Homa. As part of Swamiji’s birthday, the Ashram administration donated an ambulance valued at Rs. 28 lakh to the Cheluvamba Hospital. The key of the ambulance was handed over to the Chief Minister symbolically.
In his address, the Chief Minister said, “Sachchidananda Swamiji is offering his kind of service to the society. His contribution to the field of medical education is immense. He has organized a one-crore Dattatreya Japa for the well-being of the world. It is not only for the welfare of the world, instead it is also relevant for the development of Karnataka.”
Mysuru District In-charge Minister S.T. Somashekar, MP Pratap Simha, MLAs S.A. Ramadas, L. Nagendra, Mayor Sunanda Phalanetra, and others were present.
Keywords: Sachchidananda Ashram/ Ganapathi Sachchidananda Swamiji/ Chief Minister Basavaraj Bommai/ 80th Birth Anniversary/ ambulance donation