ಪಿಡಿಓಗಳನ್ನ ಹದ್ಧುಬಸ್ತಿನಲ್ಲಿಡಿ: ಜನರಿಗೆ ವಿಶ್ವಾಸ ಮೂಡುವಂತೆ ಕೆಲಸ ಮಾಡಿ- ಸಿಇಒಗಳಿಗೆ ಸಿಎಂ ಬೊಮ್ಮಾಯಿ ಖಡಕ್ ವಾರ್ನಿಂಗ್.

ಬೆಂಗಳೂರು,ಮೇ,9,2022(www.justkannada.in):  ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.  ಪಿಡಿಓಗಳನ್ನ ಹದ್ಧುಬಸ್ತಿನಲ್ಲಿಡಿ. ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸ ಮಾಡಿ ಎಂದು ಜಿಲ್ಲಾಪಂಚಾಯತ್ ಸಿಇಒಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದರು.

ಜಿಲ್ಲಾ ಪಂಚಾಯಿತ್​ ಸಿಇಒಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಮಲೋಚನೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಧಿಕಾರ ವಿಕೇಂದ್ರೀಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಿ. ಮೊದಲು ನೀವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಿಇಒಗಳೇ ಗ್ರಾಮಗಳಿಗೆ ಹೋಗಲ್ಲ, ಪಿಡಿಒಗಳು ನಿಮಗೆ ಹೆದರಲ್ಲ. ಎಷ್ಟು ಜನ ಗ್ರಾ.ಪಂ.ಗಳಿಗೆ ಹೋಗಿ ಪರಿಶೀಲನೆ ಮಾಡಿದ್ದೀರಾ? ಎಷ್ಟು ಜನ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿದ್ದೀರಾ? ನಾಲ್ಕು ತಿಂಗಳ ಕೆಲಸವನ್ನು 12 ತಿಂಗಳು ಮಾಡುತ್ತೀರಿ. ಇವತ್ತಿನಿಂದ ಬದಲಾವಣೆ ಕಾರ್ಯ ಆರಂಭ ಆಗಬೇಕು. ಜನರಿಗೆ ವಿಶ್ವಾಸ ಬರುವಂತೆ ಕೆಲಸ ಮಾಡಿ ಎಂದು ಸೂಚನೆ ನೀಡಿದರು.

ಅತ್ಯಂತ ಯೋಜನಾಬದ್ಧ ವೈಜ್ಞಾನಿಕ ದಾರಿಯಲ್ಲಿ ಸಾಗುತ್ತಿದ್ದೇವೆ. ಬೇರೆಯವರ ತರಹವೇ ನನ್ನ ಆಡಳಿತ ಅಂದುಕೊಳ್ಳಬೇಡಿ. ನನ್ನ ಸ್ಟೈಲೇ ಬೇರೆ, ಹೇಳೋರು ಕೇಳೋರೂ ಯಾರೂ ಇಲ್ಲ ಅಂದುಕೊಂಡಿದ್ದೀರಾ? ಐ ಆಯಮ್ ಸೀರಿಯಸ್. ಶಾಲೆಗಳಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಹಾಕಿ ಅಂದಿದ್ದೇವೆ. ಎಷ್ಟು ಜನ ಇದನ್ನು ಗಂಭೀರವಾಗಿ ಪರಿಗಣಿಸಿದ್ದೀರಾ? ಒಂದು ಜಿಲ್ಲೆಯಲ್ಲಿ 3 ಲಕ್ಷ ಮಕ್ಕಳಿದ್ದಾರೆ. ನಾಳೆ ಮಕ್ಕಳಿಗೆ ಏನಾದರೂ ಅದರೆ ಯಾರು ಜವಾಬ್ದಾರಿ? ಸೋಷಿಯಲ್ ಮತ್ತು ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: CM Basavaraj Bommai- Warning-CEO- meeting

ENGLISH SUMMARY…

Chief Minister Basavaraj Bommai today asked the Zilla Panchayat CEOs to keep the PDOs and other sub-ordinate officers under control and win the trust of people through work.
The Chief Minister held a meeting of the ZP CEOs today in Bengaluru. “Please ensure proper decentralisation of power. Visit the villages first and inspect. There are allegations that CEOs won’t visit the villages at all and PDOs are not afraid of you. How many of you have visited the GPs and inspected? How many beneficiaries lists have you have selected? You people will drag the work for 12 months which can be completed in 4 months. But it should change from now onwards. Work and win the trust of the people,” he said.
“The administration under our government is moving in a very scientific manner. Don’t consider my administration like others. My style of work is different. Do you think there is nobody to question you? I am serious. We have asked you to administer vaccines to children in schools. How many of you have considered it seriously? There are about 3 lakh children in one district. If anything happens to them who will be responsible? It is your duty to implement social and government programs,” he warned.