ಕಬಿನಿ  ಮತ್ತು ಕೆಆರ್ ಎಸ್ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಮಂಡ್ಯ/ಮೈಸೂರು,ಜುಲೈ,20,2022(www.justkannada.in):  ರಾಜ್ಯಾದ್ಯಂತ ಉತ್ತಮ ವರ್ಷಧಾರೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು ಈ ಮಧ್ಯೆ ಇಂದು ಕೆಆರ್ ಎಸ್ ಮತ್ತು ಕಬಿನಿ ಜಲಾಶಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಾಗೀನ ಅರ್ಪಿಸಿದರು.

ಮೊದಲು ಹೆಚ್.ಡಿ ಕೊಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಪತ್ನಿ ಚೆನ್ನಮ್ಮ ಜತೆ ಸಿಎಂ ಬಸವರಾಜ ಬೊಮ್ಮಾಯಿ ಬಾಗೀನ ಅರ್ಪಿಸಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅನಿಲ್ ಚಿಕ್ಕಮಾದು, ಹರ್ಷವರ್ದನ್ ಉಪಸ್ಥಿತರಿದ್ದರು.

ಬಳಿಕ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ, ಡ್ಯಾಂಗೆ ಬಾಗೀನ ಅರ್ಪಿಸಿದರು. ನಂತರ  ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.  ಈ ವೇಳೆ ಸಚಿವರಾದ ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಗೋವಿಂದ ಕಾರಜೋಳ,  ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸೇರಿ ಹಲವರು ಉಪಸ್ಥಿತರಿದ್ದರು.

Key words: CM Basavaraja Bommai –bagina-Kabini – KRS -Reservoir.

ENGLISH SUMMARY…

CM Bommai offers bagina to Kabini and KRS reservoirs
Mandya/Mysuru, July 20, 2022 (www.justkannada.in): Several reservoirs in the state are full following good monsoons this year. Chief Minister Basavaraj Bommai offered bagina to the KRS and Kabini reservoirs today.
The CM visited the Kabini reservoir at Beechanahalli, in H.D. Kote Taluk first, along with his wife Chennamma and offered the Bagina. He was accompanied by Mysuru District In-charge Minister S.T. Somashekar, Water Resources Minister Govind Karajola, MLAs Anil Chikkamadu, Harshavardhan.
Later, he visited the KRS reservoir in Mandya District and offered bagina and puja. Ministers Gopalaiah, S.T. Somashekar, Govinda Karajola, MLAs Ravinda Srikantaiah, Annadani and others accompanied him.
Keywords: CM Bommai/ Bagina/ Kabini/ KRS