ಬೆಂಗಳೂರು,ಮಾರ್ಚ್,28,2023(www.justkannada.in): ಜಿಲ್ಲೆಗೊಂದು ವಿಶ್ವವಿದ್ಯಾಲಯ’ ಇರಬೇಕೆಂಬ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಹಾಸನ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ ಮತ್ತು ಬೀದರ್ ವಿವಿ ಹಾಗೂ ಮಂಡ್ಯ ಮತ್ತು ರಾಯಚೂರು ಸಂಯೋಜಿತ ವಿಶ್ವವಿದ್ಯಾಲಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುಯಲ್ ಆಗಿ ಉದ್ಘಾಟಿಸಿದರು.
ಇದರ ಜತೆಯಲ್ಲೇ 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು 75 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೂ ಚಾಲನೆ ನೀಡಲಾಯಿತು. ಅಲ್ಲದೆ, ಧಾರವಾಡದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಕಟ್ಟಡವನ್ನು ಕೂಡ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, “ರಾಜ್ಯ ಸರಕಾರದ ಕಳೆದ ಎರಡು ಬಜೆಟ್ ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಅಪಾರ ಮಹತ್ವ ಕೊಡಲಾಗಿದೆ. ನಮ್ಮ ಶಿಕ್ಷಣ ಮಾದರಿಯು ದೇಶಕ್ಕೆ ಮಾದರಿಯಾಗಿದೆ” ಎಂದರು.
ವಿಶ್ವವಿದ್ಯಾಲಯ ಎಂದರೆ ನೂರಾರು ಎಕರೆ ಜಾಗದಲ್ಲಿ ಇರುವ ಕಲ್ಲಿನ ಕಟ್ಟಡವಲ್ಲ. ರಾಜ್ಯದ ಯುವಜನರಿಗೆ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಗುರಿಯೊಂದಿಗೆ ಕೆಐಟಿ ಆರಂಭಿಸಲಾಗಿದೆ. ಇವು ಐದು ವರ್ಷಗಳಲ್ಲಿ ಐಐಟಿ ಮಟ್ಟಕ್ಕೆ ಹೋಗಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣದ ಬಲವರ್ಧನೆಗೆ ಸಹಭಾಗಿತ್ವ ಅತ್ಯಗತ್ಯವಾಗಿದೆ. ಹೀಗಾಗಿ ಕೆಐಟಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ಅವರು ನುಡಿದರು.
ಒಂದು ಕಾಲದಲ್ಲಿ ಭೂಮಿಯ ಒಡೆತನ ಮತ್ತು ಹಣ ಯಜಮಾನಿಕೆಯ ಶಕ್ತಿಗಳಾಗಿದ್ದವು. ಆದರೆ ಈಗ ಜ್ಞಾನವು ಆ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯಗಳು ಮುಂದಿನ ಜನಾಂಗಗಳನ್ನು ಸೃಷ್ಟಿಸುವ ತಾಣಗಳಾಗಿವೆ ಎಂದು ಅವರು ಪ್ರತಿಪಾದಿಸಿದರು.
ಮುಂದಿನ 25 ವರ್ಷಗಳು ದೇಶಕ್ಕೆ ಅಮೃತ ಕಾಲವಾಗಿವೆ. ಪಾಕಿಸ್ತಾನ, ಚೀನಾ ಸೇರಿ ಇಡೀ ಜಗತ್ತು ಭಾರತದತ್ತ ಬೆರಗಿನಿಂದ ನೋಡುತ್ತಿದೆ. ವಿದ್ಯಾರ್ಥಿಗಳು ಜ್ಞಾನವನ್ನು ಗಳಿಸಿಕೊಂಡು ಪರಮಹಂಸತ್ವವನ್ನು ಗಳಿಸಿ ಕೊಳ್ಳಬೇಕು ಎಂದು ಅವರು ಆಶಿಸಿದರು.
ಕಲಿಕೆ, ಕೌಶಲ್ಯ ಎರಡಕ್ಕೂ ಒತ್ತು
ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಕಲಿಕೆ ಮತ್ತು ಕೌಶಲ್ಯ ಎರಡಕ್ಕೂ ಒತ್ತು ಕೊಡಲಾಗಿದೆ ಎಂದರು.
ರಾಜ್ಯದಲ್ಲಿ ಅಳವಡಿಸಿ ಕೊಂಡಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ತಂತ್ರಾಂಶದಂತಹ ಪರಿಣಾಮಕಾರಿ ವ್ಯವಸ್ಥೆಯು ಇಡೀ ಪ್ರಪಂಚದಲ್ಲೇ ಎಲ್ಲೂ ಇಲ್ಲ. ಇದರಿಂದ ನಮ್ಮಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಎರಡೂ ಬಂದಿದೆ ಎಂದರು.
ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ 25 ವಿ.ವಿ.ಗಳನ್ನು ಸ್ಥಾಪಿಸಿದೆ. ಜತೆಗೆ ಡಿಜಿಟಲೀಕರಣದ ಮೂಲಕ ಆಮೂಲಾಗ್ರ ಬದಲಾವಣೆ ಮಾಡಲಾಗುತ್ತಿದೆ. ಇದರ ಫಲವಾಗಿ 310 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದೇ ಮೊದಲ ಬಾರಿಗೆ ನ್ಯಾಕ್ ಮಾನ್ಯತೆ ಪಡೆದುಕೊಂಡಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ವೈ ಎಸ್ ಸಿದ್ಧೇಗೌಡ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಮುಂತಾದವರು ಉಪಸ್ಥಿತರಿದ್ದರು. ಎಲ್ಲ ಕುಲಪತಿಗಳು ತಮ್ಮ ಜಾಗದಿಂದಲೇ ವರ್ಚುವಲ್ ಮೂಲಕ ಭಾಗಿಯಾಗಿದ್ದರು.
ಸಚಿವರಿಗೆ ಶಹಭಾಷ್ ಎಂದ ಸಿಎಂ
ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರನ್ನು ವಿಶೇಷವಾಗಿ ಮೆಚ್ಚಿಕೊಂಡರು. ಸಚಿವರ ಬಗ್ಗೆ ಉಲ್ಲೇಖಿಸಿದ ಅವರು, “ಅಶ್ವತ್ ನಾರಾಯಣ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದೇ ಸಮನೆ ಉಪಯುಕ್ತ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸತನದ ಕ್ರಾಂತಿ ಕಂಡುಬರುತ್ತಿದೆ. ಇವರು ಇಲ್ಲಿ ಮಾಡಿರುವ ಕೆಲಸಗಳು ಎಂದೆಂದೂ ನೆನಪಿನಲ್ಲಿ ಇರಲಿವೆ” ಎಂದರು.
ENGLISH SUMMARY..
CM inaugurates nine new universities
BENGALURU: Chief Minister Basavaraj Bommai virtually inaugurated the nine newly established universities on Tuesday.
They include Chamarajanagar, Hassan, Kodagu, Haveri, Koppal, Bagalkot, and Bidar. and integrated universities of Mandya and Raichur. These varsities have been set up under the ‘one district- one university’ concept as aspired in NEP-2020.
Along with this, an ambitious project to develop seven government engineering colleges as ‘The Karnataka Institute of Technology’ (KIT) by spending Rs 75 crore was also launched. The newly constructed Karnataka Higher Education Academy building at Dharwad was also inaugurated.
Speaking on the occasion, the Chief Minister said, “In the last two budgets of the state government, a lot of push has been given to education and health.
Saying, the KIT initiative has been taken up to provide the best quality technical education to the youth of the state, he expressed hope that these would attain the IIT level in five years.
The partnership is essential for the strengthening of higher education. Hence, KITs will enter into MoUs with reputed global educational institutions, he asserted.
“The next 25 years is going to be ‘marital’ for the country. The students should acquire knowledge and engage in providing solutions to the global challenges”, Bommai stated.
Meanwhile, he lauded the Higher Education Minister for taking up the path-breaking initiatives.
Speaking on the occasion, Higher Education Minister Dr C.N. Ashwathnarayan said that both learning and imparting skills are being emphasised in higher education.
“The UUCMS (Unified University and College Management System)
adopted in the state has brought accountability and transparency”, he opined.
The government has set up 25 universities in the last four years. Besides, a radical change is being made through digitization. As a result, 310 government first-grade colleges have attained NAAC accreditation for the first time, Narayan said.
Industries Minister Murugesh Nirani, Higher Education Council Vice-President Y S Siddegowda, Higher Education Department Principal Secretary S R Umashankar and others were present.
Key words: CM-Basavaraja Bommai -inaugurated -9 new universities.