ಬೆಂಗಳೂರು,ಸೆಪ್ಟಂಬರ್,13,2021(www.justkannada.in): ತೈಲ. ಗ್ಯಾಸ್, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಎತ್ತಿನಗಾಡಿ ಚಲೋ ಪ್ರತಿಭಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಯುಪಿಎ ಸರ್ಕಾರ ಇದ್ದಾಗಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಬೇಕಿತ್ತು. ಆಗ ಪ್ರತಿಭಟನೆಗೆ ಅರ್ಥ ಇತ್ತು. ಸದನದಲ್ಲಿ ಪ್ರಶ್ನೆ ಎತ್ತಿದರೇ ಸದನದಲ್ಲೇ ತಕ್ಕ ಉತ್ತರ ಕೊಡ್ತೇನೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಎತ್ತಿನಗಾಡಿ ಚಲೋನಿಂದ ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ಉಂಟಾಯಿತು. ಸಚಿವ ಎಸ್ ಟಿ ಸೋಮಶೇಖರ್ ಗೂ ಸಹ ಟ್ರಾಫಿಕ್ ಬಿಸಿ ತಟ್ಟಿತು. ಇನ್ನು ಸಿಎಂ ನಿವಾಸದ ಬಳಿ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
Key words: CM -Basavaraja Bommai – outrage-Congress-ettinagadi-protest