ಬೆಂಗಳೂರು,ನವೆಂಬರ್,26,2022(www.justkannada.in): ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚಿಂತಿಸಲಾಗಿದ್ದು, ಕೇಂದ್ರದ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಲಾಗಿದೆ. ಹೊರ ರಾಜ್ಯಗಳಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ಅಧ್ಯಯನ ಮಾಡುತ್ತೇವೆ ಎಂದರು.
ಅಕ್ರಮ ವೋಟರ್ ಐಡಿ ಪ್ರಕರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಈ ಕೇಸ್ ಸಂಬಂಧ ಹಲವು ಜನರನ್ನ ಬಂಧಿಸಿದ್ದೇವೆ. ಅಕ್ರಮ ಕೇಸ್ ನಲ್ಲಿ ಅಧಿಕಾರಿಗಳನ್ನೂ ಕೂಡ ವಿಚಾರಣೆ ಮಾಡುತ್ತೇವೆ. ಎರಡು ಕಡೆ ವೊಟರ್ ಐಡಿ ಇದ್ದರೇ ರದ್ದಾಗುತ್ತೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮವಾಗುತ್ತೆ.ಮುಕ್ತವಾಗಿ ತನಿಖೆ ನಡೆಸಲು ನಾವು ಸಿದ‍್ಧ ಎಂದು ತಿಳಿಸಿದರು.
ಕರ್ನಾಟಕ ಬಸ್ ಮೇಲೆ ಮಹಾರಾಷ್ಟ್ರ ಪುಂಡರಿಂದ ಕಲ್ಲು ತೂರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರ ಗೃಹ ಸಚಿವರ ಜೊತೆ ನಮ್ಮ ಗೃಹ ಸಚಿವರು ಮಾತನಾಡುತ್ತಾರೆ. ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾನೆ ಎಂದರು.
Key words: CM- Basavaraja Bommai – thinking – implementation -uniform civil code