ನವದೆಹಲಿ,ಆ, 26,2021(www.justkannada.in): ನವದೆಹಲಿಯ ಚಾಣಕ್ಯಪುರಿ ಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯಕ್ಕೆ ಇಂದು ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸಂದರ್ಭದಲ್ಲಿ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು.
ಸ್ಮಾರಕಕ್ಕೆ ಭೇಟಿ ನೀಡಿರುವುದು ಅವಿಸ್ಮರಣೀಯ ಘಳಿಗೆ. ಈ ಮ್ಯೂಸಿಯಂ ಪೊಲೀಸರ ಕರ್ತವ್ಯಪರತೆ ಹಾಗೂ ಸಮರ್ಪಣಾ ಭಾವದ ಕುರಿತು ಒಳನೋಟ ನೀಡುತ್ತದೆ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿರುವ ಕಾರಣ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಈ ಭೇಟಿಯು ನನ್ನಲ್ಲಿ ಸಮರ್ಪಣಾ ಭಾವ ಮತ್ತು ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸಿದೆ. ದೇಶದ ಎಲ್ಲ ಪೊಲೀಸರಿಗೆ ನನ್ನ ನಮನಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಅಭಿಪ್ರಾಯ ದಾಖಲಿಸಿದರು.
ENGLISH SUMMARY…
CM Basavaraj Bommai visits National Police Memorial and Museum
Mysuru, August 26, 2021 (www.justkannada.in): Chief Minister Basavaraj Bommai, who is in New Delhi, visited the National Police Memorial at Chanakyapuri today and offered floral tributes.
The CM who visited the National Police Memorial and Museum documented his comments in the visitors’ book.
He mentioned that his visit to the memorial is unforgettable. “The museum provides an insight to understand the commitment of the police towards their job and their dedication. Democracy is successful only because the police are protecting law and order. This visit has enlightened their commitment and duty consciousness. I offer my heartfelt gratitude to all the police personnel of the country,” the lines in the visitors’ book read.
Keywords: Chief Minister Basavaraj Bommai/ New Delhi/ visits Police Memorial/ Museum/ Chankyapuri
Key words: CM -Basavaraja Bommai -visits – National Police Memorial –Museum-new delhi