ಬೆಂಗಳೂರು,ಮೇ,20,2022(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್ ಹಾಕಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ.
ಇಂದು 3ನೇ ದಿನ ಸಿಎಂ ಬಸವರಾಜ ಬೊಮ್ಮಾಯಿ, ಹೊರಮಾವು ಮತ್ತು ರಾಮಮೂರ್ತಿ ನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಮಳೆಪೀಡಿತ ಜನರ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, 8 ಜೋನ್ ಗಳಿಗೆ 8 ಸಚಿವರನ್ನ ನೇಮಕ ಮಾಡುತ್ತೇವೆ. ಪ್ರತಿ ಜೋನ್ ನಲ್ಲೂ ಸಚಿವರು ನೇತೃತ್ವದ ವಹಿಸುತ್ತಾರೆ. ಜೋನ್ ಅಭಿವೃದ್ದಿ ಜೊತೆಗೆ ಮಳೆ ಬಂದಾಗ ನಿರ್ವಹಣೆ ಮಾಡಲಿದ್ದಾರೆ.
ಒಂದೊಂದು ಜೋನ್ ಗೆ ಟಾಸ್ಕ್ ಫೋರ್ಸ್ ಮಾಡ್ತೀವಿ. 8 ಜೋನ್ ಗಳಲ್ಲಿ 8 ಸಚಿವರ ನೇಮಕ ಮಾಡಿದ್ದೇವೆ. ಪ್ರತಿಯೊಂದು ಜೋನ್ ನಲ್ಲೂ ಸಚಿವರ ನೇತೃತ್ವ ವಹಿಸಿರುತ್ತಾರೆ. ಸಚಿವರು, ಸ್ಥಳೀಯ ಶಾಸಕರು, ಸಂಸದರು, ಇಂಜಿನಿಯರ್ಗಳು ಟಾಸ್ಕ್ ಫೋರ್ಸ್ನಲ್ಲಿ ಇರುತ್ತಾರೆ. ಜೋನ್ ಅಭಿವೃದ್ಧಿ ಜೊತೆಜೊತೆಗೆ ಈ ರೀತಿ ಮಳೆ ಬಂದಾಗ ಅದರ ನಿರ್ವಹಣೆ ಕೂಡ ಮಾಡುತ್ತಾರೆ. ಇಂದೇ ಟಾಸ್ಕ್ ಫೋರ್ಸ್ ರಚನೆ ಮಾಡಿ ಸಚಿವರ ನೇಮಕ ಮಾಡುತ್ತೇವೆ. 900 ಮೀಟರ್ ಅಡಿಷನಲ್ ಡ್ರೈನೇಜ್ ಕೂಡ ಮಾಡುತ್ತಿದ್ದೇವೆ. ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವು ಮಾಡಿಸುವ ಕೆಲಸ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Key words: CM Bommai- City Rounds – 3rd day-bangalore