ಹುಬ್ಬಳ್ಳಿ,ಡಿಸೆಂಬರ್,14,2022(www.justkannada.in): ಒಂದೇ ಸೂರಿನಡಿ 12 ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸುವ ರಾಜ್ಯಾದ್ಯಂತ 114 ‘ನಮ್ಮ ಕ್ಲಿನಿಕ್’ ಅನ್ನು ಸಿಎಂ ಬಸವರಾಜ ಬೊಮ್ಮಯಿ ಲೋಕಾರ್ಪಣೆಗೊಳಿಸಿದರು.
ಹುಬ್ಬಳ್ಳಿ-ಧಾರವಾಡ ನಗರದ ಬೈರಿದೇವರಕೊಪ್ಪದಲ್ಲಿ ವರ್ಚುವಲ್ ಮೂಲಕ 114 ‘ನಮ್ಮ ಕ್ಲಿನಿಕ್’ ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ಮೂಲಕ ರಾಜ್ಯದಲ್ಲಿ ಒಟ್ಟು 114 ನಮ್ಮ ಕ್ಲಿನಿಕ್ಗಳು ಏಕಕಾಲಕ್ಕೆ ಕಾರ್ಯಾರಂಭಗೊಂಡಿವೆ.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಬಡವರಿಗೆ ಅನುಕೂಲವಾಗಲು ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ಜನವರಿ ಅಂತ್ಯದೊಳಗೆ ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಆರಂಭ ಮಾಡಲಾಗುವುದು ಎಂದು ತಿಳಿಸಿದರು.
100 ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣಿನ ತಪಾಸಣೆ, ಅಪರೇಷನ್, ಕನ್ನಡಕ ವಿತರಣೆ. ಉಚಿತ ಶ್ರವಣಯಂತ್ರ ವಿತರಣೆಗೆ 500 ಕೋಟಿ ರೂ ಅನುದಾನ ನೀಡಲಾಗುತ್ತದೆ. ಬಡವರು ಸೇರಿ ಎಲ್ಲರಿಗೂ ಅತ್ಯುತ್ತಮ ಆರೋಗ್ಯ ಸೇವೆ ಸಿಗಬೇಕು. ಬಡವರ್ಗದ ಜನರಿಗೆ ಸಮಗ್ರ ಆರೋಗ್ಯ ಸೇವೆ ನೀಡಬೇಕು ಎಂದರು.
Key words: CM-Bommai -inaugurated -114 -namma clinics – state.