ಬೆಂಗಳೂರು,ಜನವರಿ,29,2022(www.justkannada.in): ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೆಕೆಂಡರಿ ಕೃಷಿ ನಿರ್ದೇಶನಾಲಯದ ಕಾರ್ಯನಿರ್ವಹಣೆಯ ರೂಪುರೇಷೆಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಹಲವು ತೀರ್ಮಾನ ಕೈಗೊಳ್ಳಲಾಯಿತು.
ಅವುಗಳು ಈ ಕೆಳಕಂಡಂತಿವೆ.
- ಸೆಕೆಂಡರಿ ಕೃಷಿ ನಿರ್ದೇಶನಾಲಯ ಕೃಷಿ ಇಲಾಖೆಗೆ ಹೊಂದಿ ಕೊಂಡಿದ್ದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು.
- ಮೀನುಗಾರಿಕೆ, ಪಶು ಸಂಗೋಪನೆ, ಪಶುವೈದ್ಯಕೀಯ ಸೇರಿದಂತೆ ಸಮಗ್ರ ಕೃಷಿ ಹಾಗೂ ನೂತನ ಚಟುವಟಿಕೆಗಳನ್ನು ಸೆಕಂಡರಿ ಕೃಷಿ ನಿರ್ದೇಶನಾಲಯ ಹೊಂದಿರಬೇಕು
- ಇತರೆ ಚಟುವಟಿಕೆಗಳಿಗೆ ಭೂಮಿಯ ಸದ್ಬಳಕೆಗೆ ಒತ್ತು ನೀಡಬೇಕು.
- ಚಟುವಟಿಕೆಗಳನ್ನು ಗುರುತಿಸಿ ಅವುಗಳಿಗೆ ಬಂಡವಾಳ ತರಬೇಕು
- ಹೆಚ್ಚು ಕಾರ್ಮಿಕರನ್ನು ಬೇಡುವ ಚಟುವಟಿಕೆಗಳು ಇರಬಾರದು
- ಸೆಕೆಂಡರಿ ಕೃಷಿಯನ್ನು ಎಫ್ ಪಿ ಓಗಳಿಗೆ ಸಂಯೋಜಿಸಬೇಕು.
- ಯೋಜನೆಯ ಪ್ರಗತಿಯ ವರದಿಗೆ ವ್ಯವಸ್ಥೆ ರೂಪಿಸಬೇಕು.
- ಮೊದಲಿಗೆ ರೈತರು ಮಾನಸಿಕವಾಗಿ ಸಿದ್ಧಗೊಳಿಸಬೇಕು.
- ಕುಟುಂಬ ತಂತ್ರಾಂಶವನ್ನು ಬಳಸಿ, ರೈತರ ಕುಟುಂಬದ ಭೂ ಒಡೆತನ, ಮಾನವ ಸಂಪನ್ಮೂಲ ಮತ್ತಿತರ ಮಾಹಿತಿಯನ್ನು ಪಡೆದು, ಅವರ ಆದಾಯ ಹೆಚ್ಚಿಸಲು ಯೋಜನೆ ರೂಪಿಸಬೇಕು.
- ಒಳನಾಡು ಮೀನುಗಾರಿಕೆಯ ಆದಾಯ ಹೆಚ್ಚಿಸಲು ಒತ್ತು ನೀಡಬೇಕು ಎಂದು ಸೂಚಿಸಿದರು.
- ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತೀರ್ಮಾನಿಸಲಾಯಿತು.
- ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತಿತರ ಸಂಬಂಧಿಸಿದ ಇಲಾಖೆಗಳು ಜೊತೆಯಾಗಿ ರೈತ ಕುಟುಂಬಗಳ ಸಮೀಕ್ಷೆ ನಡೆಸುವಂತೆ ಸೂಚಿಸಿದರು.
- ಜಿಲ್ಲಾ ಸಮಿತಿಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳ ತಜ್ಞರ ನೆರವು ಪಡೆಯಲು ಸೂಚಿಸಲಾಯಿತು.
- ಕೃಷಿ ಉತ್ಪನ್ನಗಳ ರಫ್ತು ಹಾಗೂ ವಿಸ್ತೃತ ಮಾರುಕಟ್ಟೆ ಒದಗಿಸಲು ಕೆಪೆಕ್ ನಲ್ಲಿ ಡಿಜಿಟಲ್ ವೇದಿಕೆ ಸೃಜಿಸುವಂತೆ ನಿರ್ದೇಶಿಸಿದರು.
Key words: cm bommai- meeting agriculture