ಬೆಂಗಳೂರು, ಮೇ 27, 2022 (www.justkannada.in): ದಾವೋಸ್ ಪ್ರವಾಸ ಮುಗಿಸಿ ರಾಜ್ಯಕ್ಕೆ ಹಿಂದಿರುಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರತೀ ಬಾರಿ ದಾವೋಸ್ ಪ್ರವಾಸ ಜನವರಿ ತಿಂಗಳಲ್ಲಿ ನಡೆಯುತ್ತಿತ್ತು. ಈ ಬಾರಿ ಮೇ ತಿಂಗಳಲ್ಲಿ ನಡೆದಿದೆ. ಈ ಹಿಂದೆ ಎಸ್.ಎಂ ಕೃಷ್ಣ, ಯಡಿಯೂರಪ್ಪ, ಸಿದ್ದರಾಮಯ್ಯ ಎಲ್ಲರೂ ಭಾಗಿಯಾಗಿದ್ದರು. ಈ ಬಾರಿ ನಾನು ಭಾಗಿಯಾಗಿದ್ದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದ್ದಿಷ್ಟು….
ಸೀಮನ್ ಹೆಲ್ತ್ ಇಂಜಿನಿಯರ್ ಸುಮಾರ್ 13 ಸಾವಿರ ಕೋಟಿ ಇನ್ವೆಸ್ಟ್ ಮಾಡಲು ಒಪ್ಪಿದ್ದಾರೆ. ಲೂಲು ಅವರು ಈಗಾಗಲೇ ಕರ್ನಾಟಕದಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಮತ್ತೆ ಎರಡು ಸಾವಿರ ಕೋಟಿ ಹೂಡಿಕೆ ಮಾಡಲು ಸಿದ್ದರಿದ್ದಾರೆ.
AB ಗ್ರೂಪ್ಸ್ ನಂಜನಗೂಡಿನಲ್ಲಿ ಇದ್ದಾರೆ. ನಾನ್ ಆಲ್ಕೋಹಾಲಿಕ್ ಬಿಯರ್ ಘಟಕ ಸ್ಥಾಪನೆ ಮಾಡಲು ಸಿದ್ದರಿದ್ದಾರೆ. ಪಾಲಿಸಿ ಮ್ಯಾಟರ್ ಇರೊದ್ರಿಂದ ಪರಿಶೀಲನೆ ನಡೆಯುತ್ತಿದೆ.
ನೈದರ್ ಎಲೆಕ್ಟ್ರಿಕಲ್ ವಿಶ್ವದಲ್ಲೇ ನಬರ್ ಒನ್. 300ಕೋಟಿ ಇನ್ವೆಸ್ಟ್ ಮಾಡಲು ಮುಂದೆ ಬದಿದ್ದಾರೆ. ಅಂದಾಜು ನಾಲ್ಕು ಸಾವಿರ ಜನರಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ. ಭಾರತಿ ಏತಲರ್ಟೆಲ್ ಇಂದ ಮೆಗಾ ಡಾಟ ಪವರ್ ಆರಂಭಿಸಲು ನಿರ್ಧಾರ.
ಅದಾನಿ ಗ್ರೂಪ್‌ನವರು ಮೆಗಾ ಡೇಟಾ ಸೆಂಟ್ರಿ, ರಿನೀವಬಲ್ ಎನರ್ಜಿ ಮಾದರಿಯಲ್ಲಿ ಇನ್ವೆಸ್ಟ್ ಮಾಡಲು ನಿರ್ಧರಿಸಿದ್ದಾರೆ.
ಕರ್ನಾಟಕದಲ್ಲಿ ಮಾಡೋ ಬರವಸೆ ನೀಡಿದ್ದಾರೆ. ಹನಿ ವೆಲ್ ಎಲೆಕ್ಟ್ರಾನಿಕ್ ಮತ್ತು ಕ್ಯಾಮೆರಾ ಕಂಪನಿ ಇದೆ. ಅವರೂ ಕೂಡ ಇಲ್ಲಿ ಪ್ಲಾಂಟ್ ಹಾಕಲು ಚಿಂತನೆ ಮಾಡಿದ್ದಾರೆ.
60-65ಸಾವಿರ ಕೋಟಿ ಕಮೀಟ್‌ಮೆಂಟ್ ಮಾಡಲಾಗಿದೆ. 25ಕಂಪನಿಗಳ ಜೊತೆ ಚರ್ಚೆಯಾಗಿದೆ. ಅವರಿಗೆ ಬೇಕಿರೋ ಎಲ್ಲಾ ಸೌಲಭ್ಯ ನೀಡಲಾಗುವುದು. ಅವರಿಗೆ ಇಲ್ಲಿರೋ ಸ್ಕಿಲ್, ಟೆಕ್ನಾಲಜಿ ಬೇಸ್, ಇಲ್ಲಿರೋ ಸೌಲಭ್ಯ, ಮ್ಯಾನ್ ಪವರ್ ಬಗ್ಗೆ ಮಾಹಿತಿ ಇದೆ. ಹಾಗಾಗಿ ಇಲ್ಲಿ ಇನ್ವೆಸ್ಟ್ ಮಾಡೋ ಇಚ್ಚೆ ಬಯಸಿದ್ದಾರೆ.
ನವೆಂಬರ್ ತಿಂಗಳಲ್ಲಿ GIM ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೋವಿಡ್ ನಂತರದ ಎಕಾನಾಮಿಯಲ್ಲಿ ಕರ್ನಾಟಕದ ಪಾಲು ಬಹುದೊಡ್ಡದಿದೆ. ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆಗೆ. ನಾವು ಕೂಡ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಮಾಡಬೇಕಿದೆ. ಇದೆಲ್ಲವನ್ನ ಗುರಿ ಮುಟ್ಟಿಸಲು ನಾವು ಬದ್ದರಿದ್ದೇವೆ.