ಬೆಂಗಳೂರು,ನ,10,2019(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ರಾಷ್ಟ್ರಪತಿಗಳ ಭೇಟಿಗೆ ಅವಕಾಶ ಕೇಳಿ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, ನವೆಂಬರ್ 8ರ ರಾತ್ರಿ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ರಾಷ್ಟ್ರಪತಿಗಳಿಗೆ ಭೇಟಿಗೆ ಅವಕಾಶ ಕೇಳಿ ಪತ್ರ ಬರೆದಿದ್ದಾರೆ. ಸಂವಿಧಾನದ ಆಶಯ, ಪಕ್ಷ ಎಲ್ಲಕ್ಕೂ ದ್ರೋಹ ಬಗೆದು ಬಿಜೆಪಿ 17 ಶಾಸಕರನ್ನ ಸೆಳೆದಿದೆ. ಅ.27 ರಂದು ಯಡಿಯೂರಪ್ಪ ಮಾತನಾಡಿದ್ದ ಆಡಿಯೋ ರಿಲೀಸ್ ಆಗಿದೆ. ಇದರಲ್ಲಿ ಯಡಿಯೂರಪ್ಪ ಮಾತ್ರವಲ್ಲ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದಾರೆ. ಸಂವಿಧಾನದ ಮುಖ್ಯಸ್ಥರು ರಾಷ್ಟ್ರಪತಿಗಳು. ಹೀಗಾಗಿ ಪತ್ರ ಬರೆಯಲಾಗಿದೆ. ಪತ್ರ ತಲುಪಿದ್ದ ಬಗ್ಗೆ ಎಂಡಾಸ್ಮೆಂಟ್ ಕೂಡ ಕೊಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನ 150 ರಿಂದ 200 ಪ್ರಮುಖ ನಾಯಕರು ರಾಷ್ಟ್ರಪತಿ ಭೇಟಿ ಮಾಡ್ತೀವಿ. ಕೇಂದ್ರ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ ವಜಾಗೆ ಭೇಟಿಗೆ ಅವಕಾಶ ಕೇಳಲಾಗಿದೆ. ಅವಕಾಶ ಯಾವಾಗ ಕೊಡ್ತಾರೆ ಅವಾಗ ಹೋಗಿ ಭೇಟಿ ಮಾಡ್ತೀವಿ. ಸದ್ಯದಲ್ಲಿ ಅವಕಾಶ ಕೊಡ್ತಾರೆ ಎಂಬ ನಂಬಿಕೆ ಇದೆ ಎಂದು ವಿ.ಎಸ್ ಉಗ್ರಪ್ಪ ತಿಳಿಸಿದರು.
Key words: CM BS Yeddyurappa- Audio -Siddaramaiah -Letter – meet – President-vs ugrappa