ಬೆಳಗಾವಿ,ಅ,18,2019(www.justkannada.in): ಬಿಜೆಪಿ ಶಾಸಕ ಉಮೇಶ್ ಕತ್ತಿ ಇದೀಗ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ.
ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ ನಮಗೆ ಪ್ರತ್ಯೇಕ ರಾಜ್ಯವನ್ನ ನೀಡಲಿ, ಈ ಭಾಗಕ್ಕೆ ಅನ್ಯಾಯವಾದರೆ ನಾನು ಸಾಯೋವರೆಗೂ ಸಹ ನನ್ನ ಹೋರಾಟ ಅಛಲ, ಕೊಲ್ಹಾಪುರ, ಸಾಂಗ್ಲಿ, ಕರಾಡ, ಸೋಲ್ಹಾಪುರ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಮಾಡಿ ಎಂದು ಶಾಸಕ ಉಮೇಶ್ ಕತ್ತಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಶಾಸಕ ಉಮೇಶ ಕತ್ತಿ, ಕೃಷ್ಣಾ ಬಚಾವೋ ಯೋಜನೆಯಲ್ಲಿ 740 ಟಿಎಂಸಿ ಸದ್ಭಳಕೆ ಆಗುತ್ತಿಲ್ಲ, ಹಿಂದೆ 1700 ಕೋಟಿ ರೂಪಾಯಿ ಜಗದೀಶ ಶೆಟ್ಟರ್ ಸರ್ಕಾರ ಹಣ ಮೀಸಲಿಟ್ಟಿದೆ, ಕರ್ನಾಟಕದ 42 ತಾಲೂಕುಗಳಿಗೆ ಮಹದಾಯಿ ನೀರು ವರದಾನವಾಗಬೇಕಿದೆ, ಮಹದಾಯಿ ನದಿಯಲ್ಲಿ ನಮಗೆ ಬಂದಿರುವ 40 ಟಿಎಂಸಿ ನೀರು ಸದ್ಭಳಕೆ ಆಗಬೇಕಿದೆ, ಚುನಾವಣೆ ಬಂದಾಗ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಎಂದು ಹೇಳುವುದು ತುಂಬಾ ಹಗುರವಾದ ಮಾತು, ನಮಗೆ ಅವರು ನೀರು ಬಿಡಿ ಎಂದು ಹೇಳಿದರೆ ನೀರು ಬಿಟ್ಟಿಲ್ಲ,. ಅದು ಎರಡು ರಾಜ್ಯದವರು ಕುಳಿತು ಮಾತನಾಡಿದಾಗ ಮಾತ್ರ ಸಾಧ್ಯ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು.
ಮಹದಾಯಿ ಯೋಜನೆ ಅಲಾಟಮೆಂಟ್ ಆಗಿ 7 ವರ್ಷವಾದರೂ ಸಹ ಕೆಲಸ ಮಾಡಲು ಆಗಿಲ್ಲ, ಕೆಲಸ ಮಾಡದೆ ಮಹಾಗೆ ನೀರು ಕೊಡುತ್ತೇವೆ ಎಂಬ ಸಿಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ ನಮಗೆ ಪ್ರತ್ಯೇಕ ರಾಜ್ಯವನ್ನ ನೀಡಲಿ, ಈ ಭಾಗಕ್ಕೆ ಅನ್ಯಾಯವಾದರೆ ನಾನು ಸಾಯೋವರೆಗೂ ಸಹ ನನ್ನ ಹೋರಾಟ ಅಛಲವಾಗಿರುತ್ತದೆ. ಕೊಲ್ಹಾಪುರ, ಸಾಂಗ್ಲಿ,ಕರಾಡ, ಸೋಲ್ಹಾಪುರ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಮಾಡಿ, ನಮಗೆ ಮೊದಲು ನೀರು ಕೊಡಿ ಎಂದು ಉಮೇಶ್ ಕತ್ತಿ ಒತ್ತಾಯಿಸಿದರು.
ಸುವರ್ಣ ಸೌಧ ಕಟ್ಟಿದ್ದಾರೆ ಆದರೆ ಅಲ್ಲಿ ಅಧಿವೇಶನವನ್ನೆ ನಡೆಸುತ್ತಿಲ್ಲ, 400 ಕೋಟಿ ರೂಪಾಯಿ ಕೊಟ್ಟು ಸುವರ್ಣ ಸೌಧ ನಿರ್ಮಾಣ ಮಾಡಿದ್ದಾರೆ ಆದರೆ ಅದೂ ಸಹ ಬಳಕೆ ಆಗುತ್ತಿಲ್ಲ ಎಂದು ಕಿಡಿಕಾರಿದ ಉಮೇಶ್ ಕತ್ತಿ, ಡಿಸಿಎಂ ಹುದ್ದೆ ನಾಮ್ಕೆವಾಸ್ತೆ ಅಷ್ಟೇ, ನಾನು ಆದರೆ ಅಖಂಡ ಕರ್ನಾಟಕದ ಮುಖ್ಯಂಮತ್ರಿಯಾಗುತ್ತೇನೆ ಎಂದರು.
ದೇಶದಲ್ಲಿ, ರಾಜ್ಯದಲ್ಲಿ ಒಂದೇ ಸರ್ಕಾರ, ಅದು ಕರ್ನಾಟಕದ ಬಿಜೆಪಿ ಸರ್ಕಾರ. ಹಾಗಾಗಿ ನೀರಾವರಿ ಯೋಜನೆಗಳಿಗೆ ಇವರಿಬ್ಬರೂ ಆದ್ಯತೆ ನೀಡಬೇಕು, ಇಲ್ಲದೇ ಹೋದಲ್ಲಿ ಉತ್ತರ ಕರ್ನಾಟಕ ಜನ ದಕ್ಷಿಣ ಕರ್ನಾಟಕಕ್ಕಿಂತ ಮತ್ತೆ 10 ವರ್ಷ ಹಿಂದುಳಿಯಲಿದೆ, ಮಹಾದಾಯಿ ಯೋಜನೆ ಜಾರಿಯಾದಲ್ಲಿ ಯೋಜನೆ ವ್ಯಾಪ್ತಿಯ ಪ್ರದೇಶ ನಂದನವನವಾಗಲಿದೆ, ಬೆನಜೀರ್ ಭುಟ್ಟೋ ಸರ್ಕಾರ ಬಂದ್ರೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ, ಹಾಗಾಗಿ ಮೂರು ರಾಜ್ಯಗಳ ಸಿಎಂ ಸೇರಿ ಮಹಾದಾಯಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
Key words: CM BS yeddyurappa-BJP mla-Umesh katti- separate state.