ಸಿಎಂ ಬಿಎಸ್ ವೈಗೆ ಮೊದಲಿದ್ಧ ಶಕ್ತಿ, ಸ್ಪಿರಿಟ್, ಆರೋಗ್ಯ ಈಗ ಇಲ್ಲ: ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹಿಸಿದ ಹೆಚ್.ವಿಶ್ವನಾಥ್.

ಬೆಂಗಳೂರು,ಜೂನ್,17,2021(www.justkannada.in): ಸಿಎಂ ಬಿಎಸ್ ಯಡಿಯೂರಪ್ಪಗೆ ಮೊದಲಿದ್ಧ ಶಕ್ತಿ, ಸ್ಪಿರಿಟ್ ಆರೋಗ್ಯ ಈಗ ಇಲ್ಲ. ಹೀಗಾಗಿ ಕಾಮನ್ ಸೆನ್ಸ್ ಇರುವ ವ್ಯಕ್ತಿಯೊಬ್ಬರನ್ನ ಸಿಎಂ ಹುದ್ದೆಗೆ ತರಲಿ. ವೀರಶೈವ ಸಮುದಾಯದವರನ್ನ ಸಿಎಂ ಮಾಡಲಿ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.jk

ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿ ಸಿಎಂ ಬಿಎಸ್ ವೈ ರಾಜೀನಾಮೆಗೆ ಆಗ್ರಹಿಸಿದ ಹೆಚ್.ವಿಶ್ವನಾಥ್, ರಾಜ್ಯ ಬಿಜೆಪಿ ಬೆಳವಣಿಗೆಯ ಬಗ್ಗೆ  ಅರುಣ್ ಸಿಂಗ್ ಬಳಿ ವಿವರಿಸಿದ್ದೇನೆ.  ನನ್ನ ಹೇಳಿಕೆಯನ್ನ ಅವರು ಗಂಭೀರವಾಗಿ ಆಲಿಸಿದರು. ನಾನು ಯಾರ ಪರನೂ ಅಲ್ಲ. ಯಾರ ವಿರೋಧನೂ ಅಲ್ಲ. ರಾಜ್ಯದ ಜನ ಈಗ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ.  ರಾಜ್ಯದಲ್ಲಿ ಕುಟುಂಬ ರಾಜಕಾರಣ ರಾಕ್ಷಸ ರಾಜಕಾರಣ ಕಾಣುತ್ತಿದೆ.  ಬಿಎಸ್ ಯಡಿಯೂರಪ್ಪ ಬಗ್ಗೆ ನನಗೆ ಅಪಾರ ಗೌರವವಿದೆ. ಪಕ್ಷ ಕಟ್ಟಿ ಬೆಳೆಸಿದ ರೀತಿ ಬಗ್ಗೆ ಗೌರವವಿದೆ. ಆದರೆ ಈಗ ರಾಜ್ಯದ ಹಿತ ದೃಷ್ಠಿಯಿಂದ ನಿರ್ಧರಿಸಲಿ ಎಂದರು.

ಬಿಎಸ್ ಯಡಿಯೂರಪ್ಪಗೆ ಮೊದಲಿದ್ದ ಶಕ್ತಿ, ಸ್ಪಿರಿಟ್, ಆರೋಗ್ಯ ಈಗಿಲ್ಲ. ಸಿಎಂ ಆಗಿ ಮುನ್ನಡೆಸುವ ಶಕ್ತಿ ಇಲ್ಲ. ಬಿಎಸ್ ವೈ ಈಗಾಗಲೇ ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾರ್ಗದರ್ಶಕರಾಗಿ ಇರಲಿ. ಸಿಎಂ ಸ್ಥಾನಕ್ಕೆ ವೀರಶೈವ ಸಮುದಾಯದವರನ್ನ ಕೂರಿಸಲಿ. ಅದರಲ್ಲೂ ಪಂಚಮಸಾಲಿ ಸಮುದಾಯದವರನ್ನೇ ಸಿಎಂ ಮಾಡಲಿ ಎಂದು ಆಗ್ರಹಿಸಿದರು.

ನಿರಾಣಿ, ಯತ್ನಾಳ್, ಬೆಲ್ಲದ್ ಮೂವರಲ್ಲಿ ಯಾರನ್ನಾದರೂ ಸಿಎಂ ಮಾಡಲಿ.

ಪಂಚಮಶಾಲಿ ಸಮುದಾಯಕ್ಕೆ ಸೇರಿದ ಮೂವರು ಶಾಸಕರಿದ್ದಾರೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್. ಮೂವರಲ್ಲಿ ಯಾರನ್ನಾದರೂ ಸಿಎಂ ಮಾಡಲಿ. ನಾನು ಹಲವು ಹುದ್ದೆಗಳನ್ನ ನಿರ್ವಹಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಈ ರೀತಿ ಹೇಳುತ್ತಿಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನ ಕರ್ನಾಟಕದಲ್ಲಿ ಸರಿಯಾಗಿ ಜಾರಿ ಮಾಡುತ್ತಿಲ್ಲ. ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು.

ENGLISH SUMMARY…

“CM BSY doesn’t have the strength, spirit and health he had earlier”: H. Vishwanath demands for replacement
Bengaluru, June 17, 2021 (www.justkannada.in): “Chief Minister B.S. Yedyurappa doesn’t have the strength, spirit, and health that he had earlier. Hence, let the party high command replace him with a person with common sense. Let them make a person from the Veerashaiva community as the CM,” said MLC H. Vishwanath.
He spoke with the press persons today in Bengaluru after meeting and discussing with the State BJP Incharge Arun Singh. “I demanded the Chief Minister B.S. Yedyurappa resign and explained the recent developments that have taken place in State BJP. Arun Singh has considered my words seriously. I am not in favour of anyone, nor against anyone. The people of the State are now talking about the State Government. Family-based politics is demonizing in the state. I have a lot of respect for B.S. Yedyurappa and his struggle in building party in the state. But let them take a suitable decision now keeping in mind the interest of the State,” he said.
“Yedyurappa doesn’t have the strength, spirit, and health now as he had earlier. He has lost the power of leading the state as CM now. He has already spoken about resignation. He has told that he is ready to resign if the party high command demands. Hence, let him continue as a mentor. Let a person belonging to the Veerashaiva community be made as the Chief Minister, especially from the Panchamasali community,” he added.
Further, he said three MLAs are belonging to the Panchamasali community, Murugesh Nirani, Basanagouda Patil Yatnal, Aravind Bellad. “Let them make any of them as CM. I am not telling this because I have also shouldered several responsibilities, but I didn’t get a berth in the cabinet.”
Keywords: H. Vishwanath/ MLC/ CM B.S. Yedyurappa/ weak/ replace

Key words: CM –BS yeddyurappa-change-MLC- H. Vishwanath