ಬೆಂಗಳೂರು,ಅ,24,2019(www.justkannada.in): ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಬಿಜೆಪಿ ಮೇಲುಗೈ ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ –ಶಿವಸೇನೆ ಮೈತ್ರಿ ಬಹುಮತದತ್ತ ಸಾಗಿದರೇ ಹರಿಯಾಣದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಹಾವು ಏಣಿಯಾಟ ಮುಂದುವರೆದಿದ್ದು ಎರಡು ಪಕ್ಷಗಳು ಸರ್ಕಾರ ರಚಿಸಲು ಶತಯಗತಾಯ ಪ್ರಯತ್ನಿಸುತ್ತಿವೆ.
ಎರಡು ರಾಜ್ಯಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ , ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಸರ್ಕಾರ ಬರೋದು ನಿಶ್ಚಿತ. ಹರಿಯಾಣಾದಲ್ಲೂ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಎರಡೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಫಲಿತಾಂಶದಿಂದ ದೇಶಾದ್ಯಂತ ಕಾಂಗ್ರೆಸ್ ನೆಲ ಕಚ್ಚುತ್ತಿರುವುದು ಸಾಭೀತಾಗಿದೆ. ಇನ್ನೂ ಪೂರ್ಣ ಫಲಿತಾಂಶ ಬಂದಿಲ್ಲ. ಪೂರ್ಣ ಫಲಿತಾಂಶದ ಬಳಿಕ ವಸ್ತುಸ್ಥಿತಿ ತಿಳಿಯಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
Key words: CM BS Yeddyurappa – confidence – formation – BJP government – hariyana- maharastra