ಬೆಂಗಳೂರು,ಜ,31,2020(www.justkannada.in): ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರು ಇಂದು ನಿವೃತ್ತಿಯಾಗುತ್ತಿದ್ದು ಇಂದು ನೂತನ ಡಿಜಿ & ಐಜಿಪಿ ಹೆಸರು ಘೋಷಣೆಯಾಗಬೇಕಿದೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿರುವ ಹಿನ್ನೆಲೆ ನೂತನ ಡಿಜಿ & ಐಜಿಪಿ ಹೆಸರು ಘೋಷಣೆ ವಿಳಂಬವಾಗುವ ಸಾಧ್ಯತೆ ಇದೆ.
ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಇಂದು ನಿವೃತ್ತಿ ಹೊಂದುತ್ತಿದ್ದಾರೆ. ಹೀಗಾಗಿ ಇಂದು ಸಂಜೆ 5.30ರೊಳಗೆ ನೂತನ ಡಿಜಿ ಐಜಿಪಿ ಹೆಸರು ಘೊಷಣೆಯಾಗಬೇಕು. ಆದರೆ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ವಿಳಂಬವಾಗುವ ನೂತನ ಡಿಜಿ & ಐಜಿಪಿ ಹೆಸರು ಘೋಷಣೆ ಸಾಧ್ಯತೆ ಇದೆ.
ಡಿಜಿ ಮತ್ತು ಐಜಿಪಿ ಹುದ್ದೆಗಾಗಿ ಆಂತರಿಕ ಭದ್ರತಾ ವಿಭಾಗದ ಡಿಸಿಪಿಯಾಗಿರುವ ಎಎಂ ಪ್ರಸಾದ್ ಮತ್ತು ಪ್ರವೀಣ್ ಸೂದ್ ಅವರ ನಡುವೆ ಪೈಪೋಟಿ ಇದೆ. 2020 ಅಕ್ಟೋಬರ್ ವರೆಗೆ ಎಎಂ ಪ್ರಸಾದ್ ಅವರ ಸೇವಾವಧಿ ಇದೆ. ಪ್ರವೀಣ್ ಸೂದ್ ಅವರ ಸೇವಾವಧಿ ನಾಲ್ಕು ವರ್ಷಗಳ ಕಾಲ ಇದೆ. ಹೀಗಾಗಿ ಎಎಂ ಪ್ರಸಾದ್ ನೂತನ ಡಿಜಿ ಮತ್ತು ಐಜಿಪಿಯಾಗುವ ಸಾಧ್ಯತೆ ಹೆಚ್ಚಿದೆ.
Key words: CM BS Yeddyurappa- Delhi-delay – announcement – new DG & IGP.