ಬೆಂಗಳೂರು,ಸೆಪ್ಟಂಬರ್,11,2020(www.justkannada.in): ಜಿಎಸ್ ಟಿ ಹಣ ಕೇಂದ್ರದಿಂದ ಆದಷ್ಟು ಬೇಗ ಬಿಡುಗಡೆ ಆಗಲಿದ್ದು, ಸಿಎಂ ದೆಹಲಿಗೆ ಹೋಗಲು ದಿನಾಂಕ ಫಿಕ್ಸ್ ಮಾಡಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಕುರಿತು ರೈತ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಚರ್ಚೆ ನಡೆಸಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅರಣ್ಯ ಸಚಿವರಾದ ಆನಂದ್ ಸಿಂಗ್, ಶಾಸಕರಾದ ಬಸವರಾಜ ಧಡೇಸೂಗೂರು, ಮಾಜಿ ಶಾಸಕರಾದ ಭೋಸರಾಜ್, ರೈತಸಂಘದ ಅಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಅನಿಲ್ ಕುಮಾರ್, ಕನೀನಿನಿ ಎಂಡಿ ಮಲ್ಲಿಕಾರ್ಜುನ ಗುಂಗೆ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಿಎಂ ಮೊನ್ನೆ ಮೀಟಿಂಗ್ ಮಾಡಿದ್ದಾರೆ. ಎಷ್ಟೇ ಕಷ್ಟ ಆದ್ರೂ ಸಾಲ ಮಾಡಿ ಆದ್ರೂ ಕೆಲಸಗಳು ಆಗ್ಬೇಕು ಅಂದಿದ್ದಾರೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇಲಾಖೆಯಲ್ಲಿ ಯಾವ ಯೋಜನೆಯೂ ಸ್ಥಗಿತ ಆಗೋದಿಲ್ಲ.ಎಲ್ಲಾ ನಡೀತಿದೆ. ಮೇಕೆದಾಟು ಇಂಪಾರ್ಟೆಂಟ್ ಯೋಜನೆಯಾಗಿದ್ದು, ದೆಹಲಿಗೆ ಹೋಗಿ ಯಾವ ಹಂತದಲ್ಲಿದೆ ಅನ್ನೋದನ್ನ ಚರ್ಚೆ ಮಾಡಬೇಕು. ಬೆಂಗಳೂರಿಗೆ ಕುಡಿಯೋದಕ್ಕೆ ನೀರು, ಪವರ್ ಪ್ರಾಜೆಕ್ಟ್ ಕೂಡ ಇದೆ. ಮತ್ತೊಂದು ದಿನ ಸಭೆ ನಡೆಸಿ ಸಂಪೂರ್ಣ ವಿವರ ಕೊಡುತ್ತೇನೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ವಿಚಾರ ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಭೂಸ್ವಾಧೀನಕ್ಕೆ ದರ ನಿಗದಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ನಾಳೆ ಮೇಕೆದಾಟುಗೆ ಹೋಗುತ್ತೇನೆ. ಖುದ್ದು ನಾನೇ ಸ್ಥಳ ಪರಿಶೀಲಿಸುತ್ತೇನೆ. ಮತ್ತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿಗೆ ಮನವಿ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಗ್ರಾಮಗಳು ಮುಳುಗಡೆಯಾಗುವ ವಿಚಾರ, ತಾಂತ್ರಿಕ ಸಮಿತಿ ರಚಿಸಿದ್ದು, ಜಲಾಶಯದ ಎತ್ತರ ಹೆಚ್ಚಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.
Key words: CM – BS yeddyurappa- fix –Delhi-date- Water Resources Minister- Ramesh jarkiholi