ಬೆಂಗಳೂರು,ಮಾ,5,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಸಿಎಂ ಬಿಎಸ್ ವೈ ಇಂದು ಮಂಡಿಸುತ್ತಿರುವ ಬಜೆಟ್ ನಲ್ಲಿ ನವ ನಗರೋತ್ಥಾನ ಯೋಜನೆ ಅಡಿ ಬೆಂಗಳೂರು ಅಭಿವೃದ್ಧಿಗೆ 8344 ಕೋಟಿ ರೂ. ಹಾಗೂ ಬೆಂಗಳೂರು ಅಭಿವೃದ್ಧಿಗೆ 8772 ಕೋಟಿ ನೆರವು ನೀಡಿದ್ದಾರೆ. ಇನ್ನು ಶುಭ್ರ ಬೆಂಗಳೂರು ಯೋಜನೆಗೆ 999 ಕೋಟಿ ರೂ. ಹಾಗೂ ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಹಾಗೆಯೇ ಬೆಂಗಳೂರು ಸುತ್ತಲ 100 ಹಳ್ಳಿಗಳಿಗೆ 1000ಕೋಟಿ ಅನುದಾನ. ಬೆಂಗಳೂರಿನಲ್ಲಿ 4 ಕಡೆ ಚಿತಾಗಾರ ನಿರ್ಮಿಸಲು ನಿರ್ಧಾರ. ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ವರೆಗೆ ಔಟರ್ ರಿಂಗ್ ರೋಡ್ ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಜತೆಗೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ.
Key words: CM BS yeddyurappa- given- Bangalore -budget