ಸುತ್ತೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ….

ಮೈಸೂರು,ನವೆಂಬರ್,25,2020(www.justkannada.in):   ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಧವಾರ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.CM BS Yeddyurappa – initiated- various -development -works –suttur

ಸುತ್ತೂರು  ಮಠಕ್ಕೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ವೀರಗಾಸೆ, ನಂದಿಕಂಬ, ಪೂಜಾ ಕುಣಿತ, ಟಮಟೆ, ವಾದ್ಯ ಸೇರಿ ಜನಪದ ಕಲಾತಂಡಗಳಿಂದ ಸಿಎಂ ಬಿಎಸ್ ವೈ ಅವರಿಗೆ ಸ್ವಾಗತ ಕೋರಲಾಯಿತು. ನಂತರ ಸಿಎಂ ಬಿಎಸ್ ಯಡಿಯೂರಪ್ಪ ಶ್ರೀ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು.CM BS Yeddyurappa – initiated- various -development -works –suttur

ಈ ನಡುವೆ ಸುತ್ತೂರು ಕ್ಷೇತ್ರದ ಅತಿಥಿ ಗೃಹ, ಗ್ರಾಮದೇವತೆ ದೇವಸ್ಥಾನ ಕಾರ್ಯಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶಿಲಾನ್ಯಾಸ  ನೆರವೇರಿಸಿದರು. ಸುತ್ತೂರು ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾನೆ ಮಾಡಿದರು. ಕಾರ್ಯಕ್ರಮದಲ್ಲಿ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹಸಚಿವ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಗಿಯಾಗಿದ್ದರು.CM BS Yeddyurappa – initiated- various -development -works –suttur

 

english summary…

CN BSY launches several developmental works in Suttur
Mysuru, Nov. 25, 2020 (www.justkannada.in): Chief Minister B.S. Yedyurappa who is on a visit to Mysuru, today launched various developmental works at the Suttur Srikshetra.
He laid the foundation stone for the construction of the new guest house and renovation works of the gramadevathe temple. He was accompanied by Deputy Chief Minister Govind Karajola, Home Minister Basavaraj Bommai, Mysuru District In-charge Minister S.T. Somashekar and others.
Keywords: CM BSY/Suttur Srikshetra/ developmental works/temple renovation

Key words: CM BS Yeddyurappa – initiated- various -development -works –suttur